ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 78 ಮಂದಿಗೆ ತಗುಲಿದ ಕೊರೊನಾ: 40 ಮಂದಿ ಗುಣಮುಖ - Uttara kannada corona latest news

ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ 78 ಮಂದಿಗೆ ಸೋಂಕು ತಗುಲಿದೆ. ಇದರ ಜೊತೆಗೆ 40 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Karwar
Karwar

By

Published : Jul 20, 2020, 5:29 PM IST

ಕಾರವಾರ:ಜಿಲ್ಲೆಯಲ್ಲಿ ಇಂದು 78 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 40 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಹಳಿಯಾಳದಲ್ಲಿ ಇಂದು ಮತ್ತೆ ಕೊರೊನಾ ಕೇಕೆ ಹಾಕಿದ್ದು, 39 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಅಂಕೋಲಾದಲ್ಲಿ 16, ಭಟ್ಕಳ 13, ಕುಮಟಾ 8, ಕಾರವಾರ ಮತ್ತು ಮುಂಡಗೋಡಿನಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.

ಸೋಂಕಿನಿಂದ ಗುಣವಾದವರ ವಿವರ:

ಸೋಂಕಿನಿಂದ ಗುಣಮುಖರಾದವರ ಪೈಕಿ ಕುಮಟಾದ 19, ಮುಂಡಗೋಡದ 14, ಕಾರವಾರದಲ್ಲಿ 5, ಹೊನ್ನಾವರ ಹಾಗೂ ಶಿರಸಿಯ ತಲಾ ಓರ್ವರು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇವರೆಗೆ ಒಟ್ಟು 1163 ಸೋಂಕಿತರು ಪತ್ತೆಯಾಗಿದ್ದು, 485 ಮಂದಿ ಗುಣಮುಖರಾಗಿದ್ದಾರೆ. 10 ಮಂದಿ ಸಾವನ್ನಪ್ಪಿದ್ದು, 668 ಮಂದಿಗೆ ಕಾರವಾರದ ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದ ಕೋವಿಡ್ ವಾರ್ಡ್ ಹಾಗೂ ಆಯಾ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.

ABOUT THE AUTHOR

...view details