ಕರ್ನಾಟಕ

karnataka

ETV Bharat / state

ಕಾರವಾರ: ಧ್ವಜಾರೋಹಣಕ್ಕೆ ತೆರಳುತ್ತಿದ್ದ ಶಿಕ್ಷಕ ಅಪಘಾತದಲ್ಲಿ ಸಾವು.. ತಲೆ ಸುತ್ತು ಬಂದು ಮೈದಾನದಲ್ಲೇ ಕುಸಿದ ಮಹಿಳಾ ಪಿಎಸ್ಐ

ಮಂಕಾಳ ವೈದ್ಯ ಅವರು ಕಾರವಾರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದರು.

77th Independence Day
ಮಂಕಾಳ ವೈದ್ಯ

By

Published : Aug 15, 2023, 1:39 PM IST

ಧ್ವಜಾರೋಹಣ ನೆರವೇರಿಸಿದ ಜಿಲ್ಲಾ‌ಉಸ್ತುವಾರಿ ಸಚಿವ ಮಂಕಾಳ ವೈದ್ಯ

ಕಾರವಾರ (ಉತ್ತರ ಕನ್ನಡ):77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜಿಲ್ಲಾ‌ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಕಾರವಾರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ 77 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಬಳಿಕ ಪರೇಡ್ ಕಮಾಂಡರ್ ಅವರ ಕೋರಿಕೆಯಂತೆ ತೆರೆದ ವಾಹನದ ಮೂಲಕ ಪರೇಡ್ ತಂಡಗಳ ಬಳಿ ತೆರಳಿ ಪರಿವೀಕ್ಷಣೆ ನಡೆಸಿದರು. ಬಳಿಕ ಮೈದಾನದಲ್ಲಿ ಪೊಲೀಸ್,‌ ಅರಣ್ಯ, ಹೋಂ ಗಾರ್ಡ್, ಎನ್‌ಸಿಸಿ ಸೇರಿ ವಿವಿಧ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಚಿವರು ಪಥಸಂಚಲನ ತಂಡದಿಂದ ಗೌರವ ವಂದನೆ ಸ್ವೀಕರಿಸಿದರು.

ಸ್ವಾತಂತ್ರ್ಯೋತ್ಸವದ ಪರೇಡ್ ಗಾಗಿ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ವಿದ್ಯಾರ್ಥಿಗಳು, ಪೊಲೀಸರು ಹಾಗೂ ವಿವಿಧ ಇಲಾಖೆಗಳ 16 ತಂಡಗಳು ಬೆಳಗ್ಗೆ 7 ಗಂಟೆಯಿಂದಲೂ ಕಾದಿದ್ದರು. 9 ಗಂಟೆಗೆ ಆಗಮಿಸಿದ ಸಚಿವ ವೈದ್ಯ ಧ್ವಜಾರೋಹಣ ಮಾಡಿದ್ದು, ಬಳಿಕ ಸುಮಾರು ಅರ್ಧ ಗಂಟೆ ಕಾಲ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದರು. ಈ ವೇಳೆ ಮಳೆ‌ ಸುರಿದರೂ ನಿಲ್ಲಿಸದೆ ಭಾಷಣ ಮುಂದುವರಿಸಿದ್ದು, ಸಾರ್ವಜನಿಕರು ಶಾಮಿಯಾನದ ಕೆಳಕ್ಕೆ ಓಡಿಬಂದರೆ, ಕವಾಯತ್ ತಂಡಗಳು ಮಳೆಯಲ್ಲೇ‌ ನಿಲ್ಲಬೇಕಾಗಿ ಬಂತು.

ಕೆಲ ನಿಮಿಷಗಳ ಮಳೆಯ ಬಳಿಕ ಒಮ್ಮೆಲೇ ಬಿಸಿಲು ಝಳಪಿಸಿದ್ದು, ಕವಾಯತ್ ತಂಡಗಳಿಗೆ ನಿರ್ಗಮನ ಪಂಥ ಸಂಚಲನಕ್ಕೆ ಆದೇಶಿಸಿದ ವೇಳೆ ಮಹಿಳಾ ಪೊಲೀಸ್ ಕವಾಯತು ತಂಡದ ನೇತೃತ್ವ ವಹಿಸಿದ್ದ ಕಾರವಾರ ಸೈಬರ್ ಅಪರಾಧ ಠಾಣೆಯ ಪಿಎಸ್ಐ ಕೋಕಿಲಾ ಅವರು ತಲೆ ಸುತ್ತು ಬಂದು ಮೈದಾನದಲ್ಲೇ ಕುಸಿದುಬಿದ್ದಿರು. ತಕ್ಷಣ ಆರಕ್ಷಕ ಸಿಬ್ಬಂದಿ ಕೋಕಿಲಾ ಅವರಿಗೆ ನೀರು ಕುಡಿಸಿ, ಆರೈಕೆ ಮಾಡಿದ್ದು, ಮತ್ತೆ ಚೇತರಿಸಿಕೊಂಡು ಅವರು ಪಥಸಂಚಲನದಲ್ಲಿ ಭಾಗಿಯಾದರು.

ಧ್ವಜಾರೋಹಣಕ್ಕೆ ತೆರಳುತ್ತಿದ್ದ ಶಿಕ್ಷಕ ಸಾವು!: ಧ್ವಜಾರೋಹಣಕ್ಕೆ ತೆರಳುತ್ತಿದ್ದ ಶಿಕ್ಷಕರೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಕುಮಟಾದ ಹಳಕಾರ್ ಕ್ರಾಸ್ ಬಳಿ ಇಂದು ಮುಂಜಾನೆ ನಡೆದಿದೆ. ಕುಮಟಾ ತಾಲೂಕು ಹೆಗಡೆ ಗ್ರಾಮದ ನಿವಾಸಿ ಗೋಪಾಲ ಪಟಗಾರ(50) ಮೃತ ದುರ್ದೈವಿ. ಗುಡೇಅಂಗಡಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಗೋಪಾಲ ದ್ವಿಚಕ್ರ ವಾಹನದಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಬುಲೆರೋ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾರವಾರ: ಕೆಸರಲ್ಲಿ ಓಟ, ಹಗ್ಗಜಗ್ಗಾಟ; ಗ್ರಾಮೀಣ ಕ್ರೀಡಾ ಸೊಗಡಿನಲ್ಲಿ ಮಿಂದೆದ್ದ ಯುವಜನತೆ

ABOUT THE AUTHOR

...view details