ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 75 ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರ ಸಂಖ್ಯೆ 1,217ಕ್ಕೆ ತಲುಪಿದೆ. 107 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ಪತ್ತೆಯಾದ ಸೋಂಕಿತರ ಪೈಕಿ ಹಳಿಯಾಳದಲ್ಲಿ 36 ಮಂದಿ, ಶಿರಸಿಯಲ್ಲಿ 9, ಮುಂಡಗೋಡದಲ್ಲಿ 7, ಕಾರವಾರ ಮತ್ತು ಅಂಕೋಲಾದಲ್ಲಿ ತಲಾ 6, ಭಟ್ಕಳದಲ್ಲಿ 4, ಹೊನ್ನಾವರದಲ್ಲಿ 3, ಜೋಯ್ಡಾದಲ್ಲಿ 2, ಯಲ್ಲಾಪುರ ಮತ್ತು ಕುಮಟಾದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿದೆ.
107 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಹಳಿಯಾಳದಲ್ಲಿ 78, ಭಟ್ಕಳದಲ್ಲಿ 15, ಕುಮಟಾದಲ್ಲಿ 10, ಅಂಕೋಲಾದಲ್ಲಿ 3, ಕಾರವಾರದಲ್ಲಿ ಓರ್ವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಅಂಕೋಲಾದಲ್ಲಿ ಓರ್ವ ಹಾಗೂ ಹೊನ್ನಾವರದಲ್ಲಿ ಒಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 21ಕ್ಕೆ ಏರಿದೆ. ಈವರೆಗೆ ಒಟ್ಟು 1,907 ಸೋಂಕಿತರು ಪತ್ತೆಯಾಗಿದ್ದು 1,217 ಮಂದಿ ಗುಣಮುಖರಾಗಿದ್ದಾರೆ. 669 ಮಂದಿಗೆ ಕೋವಿಡ್-19 ಆಸ್ಪತ್ರೆ ಹಾಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.