ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಮುಂದುವರೆದಿದ್ದು ಮೇ.14 ರಂದು ಜಿಲ್ಲೆಯಾದ್ಯಂತ 637 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಉತ್ತರ ಕನ್ನಡದಲ್ಲಿ 637 ಮಂದಿಗೆ ಪಾಸಿಟಿವ್: 16 ಸೋಂಕಿತರು ಬಲಿ - ಉತ್ತರಕನ್ನಡದಲ್ಲಿ 637 ಮಂದಿಗೆ ಪಾಸಿಟಿವ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹೊಸದಾಗಿ 637 ಜನರಿಗೆ ಸೋಂಕು ತಗುಲಿದೆ. ಜೊತೆಗೆ 16 ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊರೊನಾ ಸಾವಿನ ಸಂಖ್ಯೆ ಸಹ ಗಣನೀಯವಾಗಿ ಏರುತ್ತಿದ್ದು, ನಿನ್ನೆ 16 ಮಂದಿ ಸೋಂಕಿತರ ಸಾವಿನೊಂದಿಗೆ ಜಿಲ್ಲೆಯ ಕೊರೊನಾ ಸಾವಿನ ಸಂಖ್ಯೆ 365ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸದ್ಯ 6,997 ಸಕ್ರಿಯ ಕೊರೊನಾ ಸೋಂಕಿತರಿದ್ದು, ಈ ಪೈಕಿ 499 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 6,498 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 30,973ಕ್ಕೆ ಏರಿಕೆಯಾದಂತಾಗಿದೆ.
ನಿನ್ನೆ ದಾಖಲಾದ ಪಾಸಿಟಿವ್ ಪ್ರಕರಣಗಳ ಪೈಕಿ ಕಾರವಾರ 85, ಅಂಕೋಲಾ 32, ಕುಮಟಾ 66, ಹೊನ್ನಾವರ 94, ಭಟ್ಕಳ 23, ಶಿರಸಿ, ಯಲ್ಲಾಪುರ ತಲಾ 4, ಮುಂಡಗೋಡ 78, ಹಳಿಯಾಳ 200 ಜೋಯಿಡಾ 51 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆ ಒಂದೇ ದಿನ 792 ಮಂದಿ ಸೋಂಕಿತರು ಗುಣಮುಖರಾಗಿದ್ದು ಇದುವರೆಗೆ ಜಿಲ್ಲಾದ್ಯಂತ 23,611 ಮಂದಿ ಚೇತರಿಸಿಕೊಂಡಂತಾಗಿದೆ.