ಕರ್ನಾಟಕ

karnataka

ETV Bharat / state

ಕರಾಟೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಅಂಕೋಲಾದ ಆರರ ಪೋರ!

ಈ ಹಿಂದೆ 254 ಪಂಚ್ ಮಾಡಿದ್ದ ಗೋವಾದ 35 ವರ್ಷದ ವ್ಯಕ್ತಿಯ ದಾಖಲೆಯನ್ನು ಆರು ವರ್ಷದ ಪೋರ ಸುಶೀಲ್ ಕುಮಾರ್ ಹೆಗಡೆ ಮುರಿದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾನೆ.

6-years-old-boy-world-record-in-karate
ಕರಾಟೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಅಂಕೋಲಾದ ಆರರ ಪೋರ

By

Published : Nov 10, 2021, 1:51 PM IST

ಕಾರವಾರ: ಕೇವಲ ಒಂದು ನಿಮಿಷದಲ್ಲಿ 305 ಕರಾಟೆ ಪಂಚ್​​ಗಳನ್ನು ಮಾಡುವುದರ ಮೂಲಕ ಆರು ವರ್ಷದ ಬಾಲಕ, ಅಂಕೋಲಾ ಮೂಲದ ಸುಶೀಲ್ ಕುಮಾರ್ ಹೆಗಡೆ ವಿಶ್ವ ದಾಖಲೆ ನಿರ್ಮಿಸಿದ್ದಾನೆ.

ಶೋಟೋಕಾನ್ ಕರಾಟೆಯ ರಾಷ್ಟ್ರಾಧ್ಯಕ್ಷ ವಿನೋದ್ ಕುಮಾರ್, ಎಕ್ಸಲೆಂಟ್ ವರ್ಲ್ಡ್ ರೆಕಾರ್ಡ್ ಮುಖ್ಯ ನಿರ್ಣಾಯಕ ಅವಿನಾಶ ವಿಶ್ವಕರ್ಮ ಅವರು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ವಿಶ್ವ ದಾಖಲೆಯನ್ನು ದೃಢೀಕರಿಸಿದ್ದಾರೆ. ಈ ಹಿಂದೆ 254 ಪಂಚ್ ಮಾಡಿದ್ದ ಗೋವಾದ 35 ವರ್ಷದ ವ್ಯಕ್ತಿಯ ದಾಖಲೆಯನ್ನು ಆರು ವರ್ಷದ ಪೋರ ಸುಶೀಲ್ ಕುಮಾರ್ ಹೆಗಡೆ ಮುರಿದು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾನೆ.

ಆರರ ಪೋರನ ದಾಖಲೆ

ಅಥಣಿಯಲ್ಲಿ ಸುಶೀಲ್ ಕುಮಾರ್ ತಾಯಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಸುಶೀಲ್ ಕೂಡ ಅಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಈತನಿಗೆ ಅಥಣಿಯ ಕರಾಟೆ ತರಬೇತುದಾರ ಮೋಹನ ಸಿಂಗ್ ರಜಪೂತ್ ಮಾರ್ಗದರ್ಶನ ನೀಡಿದ್ದರು.

ಇದನ್ನೂ ಓದಿ:ಮೈಸೂರಿನಲ್ಲಿ ಕ್ಲೋರಿನ್ ಅನಿಲ ಸೋರಿಕೆ: ಅವಘಡ ತಪ್ಪಿಸಲು ಬಂದ ಅಗ್ನಿಶಾಮಕ ದಳ‌ದ 6 ಸಿಬ್ಬಂದಿ ಅಸ್ವಸ್ಥ

ABOUT THE AUTHOR

...view details