ಕರ್ನಾಟಕ

karnataka

ETV Bharat / state

ಒಂಟೆಗಳ ಕಾಲು, ಬಾಯಿಗೆ ಹಗ್ಗ ಕಟ್ಟಿ ಸಾಗಣೆ: ಚೇಸ್ ಮಾಡಿ ಹಿಡಿದ ಯಲ್ಲಾಪುರ ಪೊಲೀಸರು - ಒಂಟೆಗಳ ಅಕ್ರಮ ಸಾಗಾಟ

ಪೊಲೀಸರು ಚೇಸ್ ಮಾಡಿ ಹಿಡಿದ ಲಾರಿಯಲ್ಲಿ ಒಂಟೆಗಳು ಪತ್ತೆಯಾಗಿವೆ.

ಒಂಟೆಗಳ ರಕ್ಷಣೆ
ಒಂಟೆಗಳ ರಕ್ಷಣೆ

By

Published : Jul 11, 2022, 3:24 PM IST

ಕಾರವಾರ:ಲಾರಿಯಲ್ಲಿಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರು ಒಂಟೆಗಳನ್ನು ಯಲ್ಲಾಪುರ ಪೊಲೀಸರು ಭಾನುವಾರ ರಕ್ಷಣೆ ಮಾಡಿದ್ದಾರೆ. ಚೆಕ್ ಪೋಸ್ಟ್​ನಲ್ಲಿ ತಪಾಸಣೆಗಾಗಿ ನಿಲ್ಲಿಸದೇ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಚೇಸ್ ಮಾಡಿ ಹಿಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಯಲ್ಲಾಪುರದ ಜೋಡುಕೆರೆ ಚೆಕ್ ಪೊಸ್ಟ್ ಬಳಿ ಹುಬ್ಬಳ್ಳಿ ಮಾರ್ಗದಿಂದ ಬಂದ ಐಸರ್​ ಲಾರಿಯನ್ನು ತಪಾಸಣೆಗೆ ಕೈ ಮಾಡಿದರು ನಿಲ್ಲಿಸದೇ ಸ್ಪೀಡಾಗಿ ತೆರಳಿದ್ದರು. ಆದರೆ, ಪೊಲೀಸರು ವಾಹನವನ್ನು ಬೆನ್ನತ್ತಿ ಅಡ್ಡಗಟ್ಟಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ ಒಂಟೆಗಳು ಪತ್ತೆಯಾಗಿವೆ. ಕಾಲು, ಮುಖಗಳಿಗೆ ಹಗ್ಗದಿಂದ ಕಟ್ಟಿ, ಒಂಟೆಗಳಿಗೆ ಮಲಗಲು ಆಗದೇ ನಿಲ್ಲಲು ಸಾಧ್ಯವಾಗದೇ ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ಒಂದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದ 27 ಮಂದಿ ನೋಡಿ ಪೊಲೀಸರಿಗೇ ಶಾಕ್​: ವಿಡಿಯೋ ವೈರಲ್​)

ABOUT THE AUTHOR

...view details