ಕಾರವಾರ:ಕೋರ್ ಕೇಬಲ್ ಕದ್ದು ಸುಟ್ಟು ಅದರಲ್ಲಿನ ತಂದಿ ತೆಗೆಯುತ್ತಿದ್ದ ಗ್ಯಾಂಗ್ವೊಂದನ್ನು ಹೆಡೆಮುರಿ ಕಟ್ಟುವಲ್ಲಿ ಉತ್ತರಕನ್ನಡ ಜಿಲ್ಲೆಯ ರಾಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.
ರಾಮನಗರ ವ್ಯಾಪ್ತಿಯ ರೈಲ್ವೆ ಸ್ಟೇಷನ್ ಬಳಿಯ ಕೋರ್ ಕೇಬಲ್ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಿಸಿಕೊಂಡಿದ್ದ ರಾಮನಗರ ಪೊಲೀಸರು ಗೋಕಾಕ್ದ ರೈಲ್ವೆ ಉದ್ಯೋಗಿ ಯಲ್ಲಪ್ಪ, ದಾಂಡೇಲಿ ಗಾಂಧಿನಗರದ ಅಜಯ್, ಸೋನು, ಜಿತೇಂದ್ರ, ದೀಪಕ್ ಹಾಗೂ ಜಗನು ಎಂಬುವವರನ್ನು ಬಂಧಿಸಿದ್ದಾರೆ. ಸುಮಾರು 15 ಲಕ್ಷ ರೂ. ಮೌಲ್ಯದ ಕೇಬಲ್ ಕಳ್ಳತನ ಮಾಡಿದ್ದು, ಆರೋಪಿಗಳಿಂದ ಒಟ್ಟು 470 ಕೆ.ಜಿ ಕೇಬಲ್ ಸುಟ್ಟು ತೆಗೆದ ತಾಮ್ರದ ತಂತಿ ವಶಪಡಿಕೊಳ್ಳಲಾಗಿದೆ.