ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 57 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಉತ್ತರಕನ್ನಡದಲ್ಲಿ 57 ಮಂದಿಗೆ ಕೊರೊನಾ ಸೋಂಕು - Uttarakannada latest news
57 ಕೊರೊನಾ ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2,284ಕ್ಕೆ ತಲುಪಿದೆ. ಈ ಪೈಕಿ 1,554 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ.
![ಉತ್ತರಕನ್ನಡದಲ್ಲಿ 57 ಮಂದಿಗೆ ಕೊರೊನಾ ಸೋಂಕು Uttarakannada corona case](https://etvbharatimages.akamaized.net/etvbharat/prod-images/768-512-06:35:28:1596546328-kn-kwr-03-covid-update-7202800-04082020182155-0408f-02423-390.jpg)
Uttarakannada corona case
ಕಾರವಾರದಲ್ಲಿ 21, ಮುಂಡಗೋಡಿನಲ್ಲಿ 10, ಹಳಿಯಾಳದಲ್ಲಿ 9, ಶಿರಸಿಯಲ್ಲಿ 5, ಭಟ್ಕಳ, ಯಲ್ಲಾಪುರದಲ್ಲಿ ತಲಾ 4, ಕುಮಟಾದಲ್ಲಿ 3, ಜೊಯಿಡಾದಲ್ಲಿ ಓರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು ಸ್ಥಳೀಯ ತಾಲೂಕು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
2,284 ಕೊರೊನಾ ಸೋಂಕಿತರ ಪೈಕಿ 1,554 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. 26 ಸೋಂಕಿತರು ಮೃತಪಟ್ಟಿದ್ದಾರೆ. 78 ಮಂದಿ ಹೋಂ ಐಸೊಲೇಶನ್ ಸೇರಿದಂತೆ 704 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.