ಕರ್ನಾಟಕ

karnataka

ETV Bharat / state

ಖಾಸಗಿ ಬಸ್​ನಲ್ಲಿ 50 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಐವರ ಬಂಧನ - 50 ಲಕ್ಷ ರೂ. ಹವಾಲ ಹಣ

ಬೆಳಗಾವಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್​ವೊಂದರಲ್ಲಿ 50 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಹವಾಲ ಹಣ
ಹವಾಲ ಹಣ

By

Published : Jan 13, 2021, 8:25 PM IST

ಕಾರವಾರ: ಖಾಸಗಿ ಬಸ್​ನಲ್ಲಿ 50 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಯಲ್ಲಾಪುರದ ಜೋಡುಕೆರೆ ಬಳಿ ನಡೆದಿದೆ.

ಗುಜರಾತ್ ಮೂಲದ ದಿನೇಶ ಠಾಕೂರ (34), ಪಂಕಜಕುಮಾರ ಪಟೇಲ್ (40), ಗೋವಿಂದ ಪಟೇಲ್ (50), ಮುಖೇಶ ಪಟೇಲ್ (55), ಉಪೇಂದ್ರ ಪಟೇಲ್ (47) ಬಂಧಿತ ಆರೋಪಿಗಳು.

50 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಐವರ ಬಂಧನ

ಬೆಳಗಾವಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎ 51 ಎಎಫ್ 9490 ನಂಬರ್​ನ ಗಣೇಶ ಟ್ರಾವೆಲ್ಸ್ ಬಸ್​ನಲ್ಲಿ ಹವಾಲಾ ಹಣ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details