ಕರ್ನಾಟಕ

karnataka

ETV Bharat / state

ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ 5.50 ಲಕ್ಷ ರೂ. ಎಗರಿಸಿದ ಕಳ್ಳರು ! - ಬಸ್ಸಿನಲ್ಲಿದ್ದ ವ್ಯಕ್ತಿಯ 5.50 ಲಕ್ಷ ರೂ ಕಳ್ಳತನ

ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ 5.50 ಲಕ್ಷ ರೂ. ಹಣವನ್ನು ದುಷ್ಕರ್ಮಿಗಳು ಕದ್ದಿರುವ ಘಟನೆ ನಡೆದಿದೆ.

theft in bus
ಬಸ್ಸಿನಲ್ಲಿ ಕಳ್ಳತನ

By

Published : Nov 6, 2020, 3:59 AM IST

ಶಿರಸಿ: ಕೆ.ಎಸ್.ಆರ್.ಟಿ.ಸಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗ್​​ನಲ್ಲಿದ್ದ 5.50 ಲಕ್ಷ ರೂ. ಹಣ ಕದ್ದಿರುವ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಾಪುರ ತಾಲೂಕಿನ ನೆಲೆಮಾಂವಿನ ರಘುಪತಿ ಕೃಷ್ಣ ಭಟ್ ಅವರು ಹಣ ಕಳೆದುಕೊಂಡ ವ್ಯಕ್ತಿ. ಇವರು ತಮ್ಮ ಸ್ನೇಹಿತ ಗಣಪತಿ ಭಟ್ ಅವರೊಂದಿಗೆ ಮಂಗಳವಾರ ರಾತ್ರಿ ಕಾನಸೂರಿನಿಂದ ಬೆಂಗಳೂರಿಗೆ ಬಸ್ ಮೂಲಕ (ಕೆ.ಎ.31-ಎಫ್-1633) ವೈಯಕ್ತಿಕ ಕೆಲಸಕ್ಕಾಗಿ ಹೋಗುತ್ತಿರುವಾಗ ಈ ಘಟನೆ ಜರುಗಿದೆ.

ತಮ್ಮ ಬ್ಯಾಗ್​​ನಲ್ಲಿದ್ದ ಒಟ್ಟು 5.೫೦ ಸಾವಿರ ರೂ. ಹಣ ಯಾರೋ ಕದ್ದಿದ್ದಾರೆ ಎಂದು ರಘುಪತಿ ಭಟ್ ಗುರುವಾರ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಪಿಐ ಪ್ರಕಾಶ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details