ಕರ್ನಾಟಕ

karnataka

ETV Bharat / state

ಹಿಜಾಬ್​ ತೀರ್ಪು ಹಿನ್ನೆಲೆ ಉತ್ತರ ಕನ್ನಡದಲ್ಲಿ 5 ದಿನ ನಿಷೇಧಾಜ್ಞೆ ಘೋಷಿಸಿದ ಜಿಲ್ಲಾಧಿಕಾರಿ! - ಹಿಜಾಬ್​ ಕುರಿತು ಹೈಕೋರ್ಟ್​ ತೀರ್ಫು

ಇಂದು ಹೈಕೋರ್ಟ್​ನಲ್ಲಿ ಹಿಜಾಬ್​ ತೀರ್ಪು ಹೊರ ಬೀಳುವ ಹಿನ್ನೆಲೆ ಉತ್ತರಕನ್ನಡದಲ್ಲಿ 5 ದಿನ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.

curfew in Uttarakannada over Hijab row, High court verdict on Hijab, Hijab issue, ಉತ್ತರಕನ್ನಡದಲ್ಲಿ ಕರ್ಫ್ಯೂ, ಹಿಜಾಬ್​ ವಿವಾದದಲ್ಲಿ ಉತ್ತರಕನ್ನಡದಲ್ಲಿ ಕರ್ಫ್ಯೂ, ಹಿಜಾಬ್​ ಕುರಿತು ಹೈಕೋರ್ಟ್​ ತೀರ್ಫು, ಹಿಜಾಬ್​ ವಿವಾದ,
ಉತ್ತರಕನ್ನಡದಲ್ಲಿ 5 ದಿನ ನಿಷೇಧಾಜ್ಞೆ ಜಾರಿ

By

Published : Mar 15, 2022, 10:17 AM IST

ಕಾರವಾರ:ಇಂದು ಹಿಜಾಬ್ ಪ್ರಕರಣದ ಕುರಿತು ಹೈಕೋರ್ಟ್ ತೀರ್ಪು ಪ್ರಕಟಿಸುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಉತ್ತರಕನ್ನಡ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಓದಿ:ಹಿಜಾಬ್​ ವಿವಾದದ ಬಗ್ಗೆ ಇಂದು ಮಹತ್ವದ ತೀರ್ಪು ಪ್ರಕಟಿಸಲಿರುವ ರಾಜ್ಯದ ಹೈಕೋರ್ಟ್​!

ಹಿಜಾಬ್ ಹಾಗೂ ಕೆಸರಿ ಶಾಲು ಧರಿಸುವ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪನ್ನು ನ್ಯಾಯಾಲಯವೂ ಇಂದು ಬೆಳಗ್ಗೆ ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 15ರ ಬೆಳಿಗ್ಗೆ 6 ಗಂಟೆಯಿಂದ ಮಾ.20ರ ರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಓದಿ:ಸರ್ಕಾರಿ ಶಾಲೆಗಳಲ್ಲಿ ಇಂಟರ್​ನೆಟ್​​ ಸೌಲಭ್ಯ: ಯಾವ ರಾಜ್ಯದಲ್ಲಿ ಎಷ್ಟಿದೆ ಗೊತ್ತಾ?

ನಿಷೇಧಾಜ್ಞೆ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಲಿದ್ದು, ಯಾರು ಕೂಡ ಪಟಾಕಿ ಸಿಡಿಸುವುದು, ಆಯುಧಗಳ ಪ್ರದರ್ಶನ, ಪ್ರತಿಕೃತಿ ದಹನ ಸೇರಿ ಯಾವುದೇ ಕೃತ್ಯ ಕೈಗೊಳ್ಳದಂತೆ ಮತ್ತು ಪ್ರತಿಭಟನೆ, ಪ್ರಚೋದನಾಕಾರಿ ಘೋಷಣೆ ಕೂಗದಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.

ABOUT THE AUTHOR

...view details