ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ 366 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆ ಪ್ರಮಾಣದಲ್ಲಿರುವ ಕೊರೊನಾ ಸೋಂಕಿತರ ಸಂಖ್ಯೆ ಜೊತೆ ಸಾವಿನ ಸಂಖ್ಯೆ ಕೂಡ ಇಳಿಮುಖವಾಗಿದೆ.
ಉತ್ತರಕನ್ನಡ: 366 ಮಂದಿಗೆ ಕೋವಿಡ್, ಇಬ್ಬರು ಸಾವು - ಉತ್ತರಕನ್ನಡ ಕೊರೊನಾ ಪ್ರಕರಣ
ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 48,043ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಒಟ್ಟು 652 ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಾದ್ಯಂತ 43,792 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
![ಉತ್ತರಕನ್ನಡ: 366 ಮಂದಿಗೆ ಕೋವಿಡ್, ಇಬ್ಬರು ಸಾವು 366-new-covid-cases-reported-in-uttara-kannada](https://etvbharatimages.akamaized.net/etvbharat/prod-images/768-512-12053926-thumbnail-3x2-news.jpg)
ಕಾರವಾರ ತಾಲೂಕಿನಲ್ಲಿ 35, ಅಂಕೋಲಾ 1, ಕುಮಟಾ 105, ಹೊನ್ನಾವರ 39, ಭಟ್ಕಳ 21, ಶಿರಸಿ 56, ಸಿದ್ದಾಪುರ 34, ಯಲ್ಲಾಪುರ 15, ಮುಂಡಗೋಡ 30, ಹಳಿಯಾಳ 14 ಜೋಯಿಡಾದಲ್ಲಿ 16 ಮಂದಿಗೆ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸದ್ಯ 3,599 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 437 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 3,162 ಮಂದಿ ಹೋಂ ಐಸೋಲೇಶನ್‌ನಲ್ಲಿದ್ದಾರೆ.
ಒಟ್ಟೂ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ 48,043ಕ್ಕೆ ಏರಿಕೆಯಾದಂತಾಗಿದೆ. 759 ಮಂದಿ ಸೋಂಕಿತರು ಗುಣಮುಖರಾಗಿದ್ದು, 2 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 652 ಮಂದಿ ಸಾವನ್ನಪ್ಪಿದ್ದು, ಇದುವರೆಗೆ ಜಿಲ್ಲೆಯಾದ್ಯಂತ 43,792 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.