ಭಟ್ಕಳ : ತಾಲೂಕಿನ ಬಂದರಿನಲ್ಲಿ ಬುಧವಾರ ಬೃಹತ್ ಗಾತ್ರದ ಮೀನು ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ, ಜಯದುರ್ಗ ಗಣೇಶ ಬೋಟುಗಳಿಗೆ ಬೃಹತ್ ಗಾತ್ರದ ತೊರ್ಕೆ ಮೀನು ದೊರಕಿದೆ.
ಬರೋಬ್ಬರಿ 300 ರಿಂದ 400 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಬಲೆಗೆ!
ಭಟ್ಕಳದಲ್ಲಿ ಬೃಹತ್ ಗಾತ್ರದ ಮೀನು ಮೀನುಗಾರರ ಬಲೆಗೆ ಬಿದ್ದಿದ್ದು, ಅದರ ತೂಕ ಬರೋಬ್ಬರಿ 300ರಿಂದ 400 ಕೆ.ಜಿ ಇದೆ ಎಂದು ಅಂದಾಜಿಸಲಾಗಿದೆ.
ಮೀನು ಅಂದಾಜು 300 ರಿಂದ 400 ಕೆ.ಜಿ ತೂಕವಿದೆ. ಸುಮಾರು 2 ಮೀಟರ್ ಉದ್ದದ ಮೀನು ಇದಾಗಿದ್ದು, ಬೃಹತ್ ಕ್ರೆನ್ನ ಸಹಾಯದಿಂದ ಮೇಲಕ್ಕೆತ್ತಲಾಗಿದೆ.
ಸಾಮಾನ್ಯವಾಗಿ ಮೀನುಗಾರರ ಬಲೆಗೆ ಬೀಳುವ ಮೀನುಗಳು 50 ರಿಂದ 100 ಕೆ.ಜಿ ತೂಕ ಹೊಂದಿರುತ್ತದೆ. ಅಪರೂಪಕ್ಕೊಮ್ಮೆ ಇಂತಹ ಬೃಹತ್ ಮೀನು ಬಲೆಗೆ ಬೀಳುತ್ತದೆ. ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತದೆ. ಮೀನುಗಾರರು ಪ್ರಯಾಸಪಟ್ಟು ಈ ಮೀನನ್ನು ದಡಕ್ಕೆ ತಂದಿದ್ದು, ಕ್ರೆನ್ ಸಹಾಯದಿಂದ ಮೇಲಕ್ಕೆ ತರಲಾಗಿದೆ.
ಬೃಹತ್ ಗಾತ್ರದ ಮೀನನ್ನು ನೋಡಲು ಅಕ್ಕ ಪಕ್ಕದ ನೂರಾರು ಜನರು ಮುಗಿ ಬಿದ್ದರು.