ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ ಬಿಜೆಪಿ ಯುವ ಮೋರ್ಚಾಗೆ ಆಯ್ಕೆಯಾದ 30 ಮಂದಿ ಪಟ್ಟಿ ಬಿಡುಗಡೆ - karwar news

ಉತ್ತರ ಕನ್ನಡದ ಬಿಜೆಪಿ ಯುವಮೋರ್ಚಾಗೆ ಆಯ್ಕೆಯಾಗಿದ್ದ 30 ಮಂದಿ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಯುವಮೋರ್ಚಾ ಜಿಲ್ಲೆಯ ಹಲವು ಭಾಗದಲ್ಲಿ ಲಾಕ್​ಡೌನ್​​​ ವೇಳೆ ಆಹಾರದ ಕಿಟ್​, ಅಗತ್ಯ ವಸ್ತುಗಳ ವಿತರಣೆಯಲ್ಲಿ ತೊಡಗಿದೆ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್​ ತಿಳಿಸಿದ್ದಾರೆ.

30 people list reased those who selected for uttarkannada bjp yuvamorcha
ಉತ್ತರಕನ್ನಡ ಬಿಜೆಪಿ ಯುವಮೋರ್ಚಾಗೆ ಆಯ್ಕೆಯಾದ 30 ಮಂದಿ ಪಟ್ಟಿ ಬಿಡುಗಡೆ

By

Published : Jun 17, 2020, 6:31 PM IST

ಕಾರವಾರ (ಉ.ಕ): ಭಾರತೀಯ ಜನತಾ ಪಾರ್ಟಿಯ ಉತ್ತರಕನ್ನಡ ಯುವಮೋರ್ಚಾಕ್ಕೆ ಆಯ್ಕೆಯಾದ 30 ಪದಾಧಿಕಾರಿಗಳ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಲಾಯಿತು.

ಉತ್ತರಕನ್ನಡ ಬಿಜೆಪಿ ಯುವಮೋರ್ಚಾಗೆ ಆಯ್ಕೆಯಾದ 30 ಮಂದಿ ಪಟ್ಟಿ ಬಿಡುಗಡೆ

ಕಾರವಾರದ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿದ ಯುವಮೋರ್ಚಾದ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ ಅಂಕೋಲಾ ಮಾತನಾಡಿ, ಯುವಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈಗಾಗಲೇ ಕೊರೊನಾ ಲಾಕ್​​ಡೌನ್​ನಿಂದ ಸಂಕಷ್ಟದಲ್ಲಿದ್ದವರಿಗೆ ನೆರವಾಗಿದ್ದಾರೆ.

ಆಹಾರ ಹಾಗೂ ದಿನಸಿ ವಸ್ತುಗಳ ಕಿಟ್​​ಗಳನ್ನು ವಿತರಿಸಿ, ಬಡವರಿಗೆ ಸಹಾಯ ಹಸ್ತ ನೀಡಿದ್ದಾರೆ. ಕಾರವಾರದಲ್ಲಿ ಶುಭಂ ಕಳಸ ಅವರಿಂದ ಆ್ಯಂಬುಲೆನ್ಸ್ ಚಾಲಕರಿಗೆ ತಿಂಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿದೆ.

ಔಷಧಿಗಳ ಅಗತ್ಯ ಇರುವವರಿಗೆ ಅದನ್ನು ಅವರ ಮನೆಗೆ ತಲುಪಿಸುವ ಕಾರ್ಯ ಮಾಡಿದ್ದೇವೆ. ಪಕ್ಷದಿಂದ ಯಾವುದೇ ಜವಬ್ದಾರಿ ನೀಡಿದರು ಯುವಮೋರ್ಚಾದ ಪದಾಧಿಕಾರಿಗಳು ಮಾಡಲು ಸಿದ್ಧರಾಗಿದ್ದಾರೆ ಎಂದರು.

ABOUT THE AUTHOR

...view details