ಕರ್ನಾಟಕ

karnataka

ETV Bharat / state

ಮಂಗಳಸೂತ್ರ ಕದ್ದೊಯ್ದ ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ - Honnavar police are investigating

ಹೊನ್ನಾವರ ಪಟ್ಟಣದ ಎಮ್ಮೆ ಪೈಲ್ ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಹತ್ತಿರ 2020 ಜುಲೈ 2 ರಂದು ರಾತ್ರಿ 8:20ರ ವೇಳೆಗೆ ಪೇಟೆಯಿಂದ ಮನೆ ಕಡೆಗೆ ತೆರಳಲು ಹೆದ್ದಾರಿ ದಾಟುತ್ತಿದ್ದ ಪೂರ್ಣಿಮಾ ನಾಗರಾಜ್ ನಾಯ್ಕ ಎಂಬುವರ ಮಂಗಳಸೂತ್ರವನ್ನು ಬೈಕ್ ಮೇಲೆ ಬಂದ ಈ ಇಬ್ಬರು ಆರೋಪಿಗಳು ಕಿತ್ತೊಯ್ದಿದ್ದರು.

ಮಂಗಳಸೂತ್ರ ಕದ್ದೊಯ್ದ ಇಬ್ಬರಿಗೆ 3 ವರ್ಷ ಜೈಲು ಶಿಕ್ಷೆ
3 years imprisonment for two who stole mangalsutra

By

Published : Oct 20, 2022, 11:53 AM IST

ಕಾರವಾರ: ಹೆದ್ದಾರಿ ದಾಟುತ್ತಿದ್ದ ಮಹಿಳೆ ಕುತ್ತಿಗೆಯಲ್ಲಿದ್ದ ಮಂಗಳಸೂತ್ರ ಕದ್ದೊಯ್ದ ಇಬ್ಬರು ಆರೋಪಿಗಳಿಗೆ ಹೊನ್ನಾವರದ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಜೈಲುಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.

ಯಲ್ಲಾಪುರದ ನಾಸಿರ್ ಅಹಮದ್ ಹಾಗೂ ಭಟ್ಕಳದ ಅಬ್ದುಲ್ ಅಲಿಂ ಶಿಕ್ಷೆಗೊಳಗಾದ ಅಪರಾಧಿಗಳು. ಹೊನ್ನಾವರ ಪಟ್ಟಣದ ಎಮ್ಮೆ ಪೈಲ್ ರಾಷ್ಟ್ರೀಯ ಹೆದ್ದಾರಿ ಕ್ರಾಸ್ ಹತ್ತಿರ 2020 ಜುಲೈ 2 ರಂದು ರಾತ್ರಿ 8:20ರ ವೇಳೆಗೆ ಪೇಟೆಯಿಂದ ಮನೆ ಕಡೆಗೆ ತೆರಳಲು ಹೆದ್ದಾರಿ ದಾಟುತ್ತಿದ್ದ ಪೂರ್ಣಿಮಾ ನಾಗರಾಜ್ ನಾಯ್ಕ ಎಂಬುವರ ಮಂಗಳಸೂತ್ರವನ್ನು ಬೈಕ್ ಮೇಲೆ ಬಂದ ಈ ಇಬ್ಬರು ಆರೋಪಿಗಳು ಕಿತ್ತೊಯ್ದಿದ್ದರು.

ಈ ಕುರಿತು ಪೂರ್ಣಿಮಾ ಹೊನ್ನಾವರ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಹೊನ್ನಾವರ ಪೊಲೀಸರು ತನಿಖೆ ನಡೆಸಿದ್ದರು. ಆಗಿನ ಪೊಲೀಸ್ ವೃತ್ತ ನಿರೀಕ್ಷಕ ವಸಂತ ಆಚಾರಿ ಆರೋಪಿಗಳನ್ನು ಪತ್ತೆ ಮಾಡಿ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆಸಿದ ಹೊನ್ನಾವರ ಜೆಎಂಎಫ್‌ಸಿ ನ್ಯಾಯಾಧೀಶರಾದ ಕುಮಾರ ಜಿ 10 ಜನ ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಂತಿಮವಾಗಿ ಆರೋಪಿಗಳಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಸಂಪದಾ ಗುನಗಾ ವಾದಿಸಿದ್ದರು.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಕೀಚಕನಿಗೆ 20 ವರ್ಷ ಜೈಲು ಶಿಕ್ಷೆ

ABOUT THE AUTHOR

...view details