ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಮೂವರಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಮೂವರಲ್ಲಿ ಸೋಂಕು ದೃಢ.... 112 ಮಂದಿ ಗುಣಮುಖ - ಕಾರವಾರ ಉತ್ತರ ಕನ್ನಡ ಲೆಟೆಸ್ಟ್ ನ್ಯೂಸ್
ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಮೂವರಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ. ಅದರಲ್ಲಿ 112 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.

Vijayapura corona news
ಭಟ್ಕಳ ತಾಲೂಕಿನ ಮುರುಡೇಶ್ವರ ಮೂಲದ 45 ವರ್ಷದ ಪುರುಷ ಹಾಗೂ 18 ವರ್ಷದ ಯುವಕನಿಗೆ ಮತ್ತು ಹಳಿಯಾಳದ 31 ವರ್ಷದ ಪುರುಷನಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ 147 ಸೋಂಕಿತರು ಪತ್ತೆಯಾಗಿದ್ದು, 112 ಮಂದಿ ಗುಣಮುಖರಾಗಿದ್ದಾರೆ. ಇನ್ನು 35 ಮಂದಿ ಸೋಂಕಿತರಿಗೆ ಕಾರವಾರದ ಕ್ರೀಮ್ಸ್ ಕೊರೊನಾ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿದಿದೆ.
Last Updated : Jun 24, 2020, 12:04 AM IST