ಕಾರವಾರ: ವಿಮಾನ ಟಿಕೆಟ್ ದರ ಮರುಪಾವತಿಯಾಗದ್ದನ್ನು ಆನ್ಲೈನ್ ಮೂಲಕ ವಿಚಾರಿಸಲು ಹೋಗಿ ಎನ್ ಪಿಸಿಐಎಲ್ ಕೈಗಾದ ಸೈಟ್ ಡೈರೆಕ್ಟರ್ ಒಬ್ಬರು ಬರೋಬ್ಬರಿ 3 ಲಕ್ಷ ರೂ ಹಣ ಕಳೆದುಕೊಂಡಿರುವ ಬಗ್ಗೆ ಕಾರವಾರ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನ್ ಪಿಸಿಐಎಲ್ ಕೈಗಾದ ಸೈಟ್ ಡೈರೆಕ್ಟರ್ ರಾಜೇಂದ್ರ ಕುಮಾರ್ ಗುಪ್ತಾ ಹಣ ಕಳೆದುಕೊಂಡವರು.
ಮೆ 29 ರಂದು ಗೋವಾದಿಂದ ಜೈಪುರಗೆ ಪ್ರಯಾಣಿಸುವ ಇಂಡಿಗೋ ಏರ್ಲೈನ್ಸ್ ನಲ್ಲಿ ಟಿಕೆಟನ್ನು ರಾಜೇಂದ್ರ ಕುಮಾರ್ ಬುಕ್ ಮಾಡಿದ್ದರು. ಆದರೆ ವಿಮಾನ ಹಾರಾಟ ರದ್ದಾಗಿದ್ದು, ಜೂ.5ರವರೆಗೂ ಹಣ ಮರು ಪಾವತಿಯಾಗದ ಹಿನ್ನೆಲೆಯಲ್ಲಿ ಜೂ.5 ರಂದು ಇಂಡಿಗೋ ಏರ್ಲೈನ್ಸ್ ಅವರ ಕಸ್ಟಮರ್ ಕೇರ್ ನಂಬರನ್ನು ಗೂಗಲ್ ನಲ್ಲಿ ಹುಡುಕಿದಾಗ ಅವರಿಗೆ ಇಂಡಿಗೋ ಏಕ್ಸಿಕ್ಯೂಟಿವ್ ಅಧಿಕಾರಿ ಎಂದು ಇರುವ ಮೊಬೈಲ್ ಸಂಖ್ಯೆ ಸಿಕ್ಕಿದೆ.