ಕಾರವಾರ: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆ ಶೇ. 80.97ರಷ್ಟು ಫಲಿತಾಂಶದೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಕೂಡ ಶೇ. 79.59 ಫಲಿತಾಂಶ ಪಡೆದು 4ನೇ ಸ್ಥಾನದಲ್ಲಿತ್ತು. ಈ ವರ್ಷ ಕೂಡ ಅದೇ ಸ್ಥಾನ ಇದ್ದು, ಆದರೆ ಫಲಿತಾಂಶದಲ್ಲಿ ಏರಿಕೆಯಾಗಿದೆ.
ಪಿಯುಸಿ ಫಲಿತಾಂಶ: ಉತ್ತರ ಕನ್ನಡಕ್ಕೆ ನಾಲ್ಕನೇ ಸ್ಥಾನ
ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉತ್ತರ ಕನ್ನಡ ಜಿಲ್ಲೆ ಶೇ. 80.97 ಅಂಕದೊಂದಿಗೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಪಿಯುಸಿ ಫಲಿತಾಂಶ ಪ್ರಕಟ
ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ನಿಂದಾಗಿ ಮುಂದೂಡಲಾಗಿದ್ದ ಇಂಗ್ಲಿಷ್ ಪರೀಕ್ಷೆಯನ್ನು ಜೂನ್ 18ರಂದು ನಡೆಸಲಾಗಿತ್ತು. ಮೊದಲ ಮೂರು ಸ್ಥಾನಗಳು ಕ್ರಮವಾಗಿ ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಪಾಲಾಗಿದ್ದು, ನಾಲ್ಕನೇ ಸ್ಥಾನ ಉತ್ತರ ಕನ್ನಡ ಜಿಲ್ಲೆಗೆ ಲಭಿಸಿದೆ.
ಶೇ. 90.71 ಅಂಕಗಳನ್ನು ಸಮನಾಗಿ ಪಡೆಯುವ ಉಡುಪಿ, ದಕ್ಷಿಣ ಕನ್ನಡ ಮೊದಲೆರಡು ಸ್ಥಾನದಲ್ಲಿವೆ. ಕೊಡಗು ಮೂರನೇ ಸ್ಥಾನ (ಸ್ಥಾನ ಶೇ. 81.53), ಉತ್ತರ ಕನ್ನಡ (ಶೇ. 80.97) ನಂತರದ ಸ್ಥಾನದಲ್ಲಿದೆ.