ಕರ್ನಾಟಕ

karnataka

ETV Bharat / state

ಕಾರವಾರ: ನಿರ್ಭಯಾ ಯೋಜನೆಯಡಿ ಪೊಲೀಸರಿಗೆ 28 ಹೊಸ ಬೈಕ್​ ವಿತರಣೆ - ನಿರ್ಭಯಾ ಯೋಜನೆ

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ಭಯಾ ಯೋಜನೆಯಡಿ ನೀಡಲಾಗುವ ಬೈಕ್​ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಬೈಕ್‌ ಓಡಿಸಿ ಹಸಿರು ಬಾವುಟ ತೋರಿಸುವ ಮೂಲಕ ಎಸ್​ಪಿ ಶಿವಪ್ರಕಾಶ್​ ದೇವರಾಜು ವಿತರಿಸಿದರು.

dsd
ನಿರ್ಭಯಾ ಯೋಜನೆಯಡಿ ಪೊಲೀಸರಿಗೆ 28 ಹೊಸ ಬೈಕ್​ ವಿತರಣೆ

By

Published : Nov 20, 2020, 1:32 PM IST

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ಭಯಾ ಯೋಜನೆಯಡಿ ನೀಡಿದ 28 ಹೊಸ ಬೈಕ್​ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್​ ದೇವರಾಜು ಹಸ್ತಾಂತರಿಸಿದರು.

ನಿರ್ಭಯಾ ಯೋಜನೆಯಡಿ ಪೊಲೀಸರಿಗೆ 28 ಹೊಸ ಬೈಕ್​ ವಿತರಣೆ

ಈ ವೇಳೆ ಮಾತನಾಡಿದ ಎಸ್​ಪಿ, ನಿರ್ಭಯಾ ಘಟನೆ ಬಳಿಕ ಕೇಂದ್ರ ಸರ್ಕಾರ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ. ಮಹಿಳೆಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಪ್ರತಿಯೊಂದು ಪೊಲೀಸ್ ಇಲಾಖೆಗೆ ಬೈಕ್‌ಗಳನ್ನು ನೀಡುವ ಯೋಜನೆಯನ್ನು ರೂಪಿಸಿದೆ.

ಈ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆಯಿಂದ ಜಿಲ್ಲೆಗೆ ನೀಡಲಾದ 28 ಬೈಕ್‌ಗಳನ್ನು ಜಿಲ್ಲೆಯ ಪ್ರತಿಯೊಂದು ಠಾಣೆಗಳಿಗೆ ಹಂಚಿಕೆ ಮಾಡಲಾಗಿದೆ. ಮಾನವ ಕಳ್ಳಸಾಗಣೆ ತಡೆ ಘಟಕ ಹಾಗೂ ಮಹಿಳಾ ಸಹಾಯವಾಣಿ ಕೇಂದ್ರಗಳಡಿ ನೂತನ ಬೈಕ್‌ಗಳು ಬಳಕೆಯಾಗಲಿವೆ ಎಂದು ಮಾಹಿತಿ ನೀಡಿದ್ದಾರೆ. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್​ ಜಾಥಾ ನಡೆಸಲಾಯಿತು.

ABOUT THE AUTHOR

...view details