ಕರ್ನಾಟಕ

karnataka

ETV Bharat / state

ಅಕ್ರಮ ಮದ್ಯ ಸಾಗಾಟ ತಪಾಸಣೆ ವೇಳೆ ಲಾರಿ ಡ್ರೈವರ್ ಎಸ್ಕೇಪ್‌: 2,700 ಲೀ.ಮದ್ಯ ವಶ

ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಲಾರಿಯು ಗೋವಾದಿಂದ ಆಗಮಿಸಿದಾಗ ಅನಮೋಡ್ ಚೆಕ್ ಪೋಸ್ಟ್ ಬಳಿ ಲಾರಿ ತಡೆದ ಸಿಬ್ಬಂದಿ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಲಾರಿ ಚಾಲಕ ಓಡಿ ಹೋಗಿದ್ದಾನೆ.

2,700 Liters illegal liquor sized at karawara
ಅಕ್ರಮ ಮದ್ಯ ಸಾಗಾಟ; ತಪಾಸಣೆ ವೇಳೆ ಓಡಿ ಹೋದ ಲಾರಿ ಡ್ರೈವರ್​ - 300 ಬಾಕ್ಸ್​​​ನಲ್ಲಿ 2,700 ಲೀ. ಮದ್ಯ ವಶ

By

Published : Mar 5, 2021, 9:22 PM IST

ಕಾರವಾರ: ಟ್ಯಾಂಕರ್ ಲಾರಿ ಮೂಲಕ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿರುವ ಬಗ್ಗೆ ಅನುಮಾನಗೊಂಡ ಅಬಕಾರಿ ಸಿಬ್ಬಂದಿ ತಪಾಸಣೆಗೆ ಮುಂದಾದ ವೇಳೆ ಲಾರಿ ಚಾಲಕ ಪರಾರಿಯಾಗಿದ್ದು, ವಾಹನದಲ್ಲಿದ್ದ 9 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿರುವ ಘಟನೆ ಜೋಯಿಡಾ ತಾಲೂಕಿನ ಅನಮೋಡ್ ಚೆಕ್ ಪೋಸ್ಟ್​​ನಲ್ಲಿ ನಡೆದಿದೆ.

ಹರಿಯಾಣ ನೋಂದಣಿ ಸಂಖ್ಯೆಯನ್ನು ಹೊಂದಿದ ಲಾರಿಯು ಗೋವಾದಿಂದ ಆಗಮಿಸಿದಾಗ ಚೆಕ್ ಪೋಸ್ಟ್ ಬಳಿ ಲಾರಿ ತಡೆದ ಸಿಬ್ಬಂದಿ ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಲಾರಿ ಚಾಲಕ ಓಡಿ ಹೋಗಿದ್ದಾನೆ.

ಇದನ್ನೂ ಓದಿ:7 ವಿದೇಶಿ ಡ್ರಗ್ಸ್​ ಮಾರಾಟಗಾರರ ಬಂಧನ... ಬರೋಬ್ಬರಿ 4 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬಳಿಕ ಲಾರಿ ತಪಾಸಣೆ ನಡೆಸಿದಾಗ 300 ಬಾಕ್ಸ್​​​ನಲ್ಲಿ ಒಟ್ಟು 2,700 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದೆ. ಲಾರಿ ಹಾಗು ಮದ್ಯ ಎರಡನ್ನೂ ವಶಕ್ಕೆ ಪಡೆದ ಅಬಕಾರಿ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details