ಕಾರವಾರದಲ್ಲಿ ₹21 ಲಕ್ಷ ಮೌಲ್ಯದ ಅಕ್ರಮ ಮದ್ಯ ನಾಶ.. - uttarakannada
ತಾಲೂಕಿನ ವಿವಿಧೆಡೆ ನಡೆಸಿದ್ದ ದಾಳಿಯಲ್ಲಿ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಸುಮಾರು ₹21 ಲಕ್ಷ ಮೌಲ್ಯದ ಅಕ್ರಮ ಮದ್ಯವನ್ನು ನಾಶಪಡಿಸಲಾಗಿದೆ. ಒಂದು ವರ್ಷದ ಹಿಂದೆ ಪೊಲೀಸರು ಹಾಗೂ ಅಬಕಾರಿ ಇಲಾಖೆಯವರು ವಶಪಡಿಸಿಕೊಂಡ ಅಕ್ರಮ ಗೋವಾ ಮದ್ಯವನ್ನು ತಾಲೂಕಿನ ಮಾಜಾಳಿ ಬಳಿಯ ಅರಣ್ಯ ಪ್ರದೇಶದಲ್ಲಿ ತಹಶೀಲ್ದಾರ್ ಆರ್‌ವಿಕಟ್ಟಿ, ಅಬಕಾರಿ ಡಿಸಿ ವೈ ಆರ್ ಮೋಹನ್ ಅವರ ಸಮ್ಮುಖದಲ್ಲಿ ನಾಶಪಡಿಸಲಾಯಿತು. ಕಾರವಾರ ತಾಲೂಕಿನ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ಮೂಲಕ ವಶಪಡಿಸಿಕೊಂಡಿದ್ದ ಒಟ್ಟು 85 ಪ್ರಕರಣಗಳ ಅಕ್ರಮ ಮದ್ಯವನ್ನು ಸರ್ಕಾರದ ನಿಯಮಾವಳಿಯಂತೆ ನಾಶಪಡಿಸಲಾಗಿದೆ. ಅಕ್ರಮವಾಗಿ ಮದ್ಯ ಸಾಗಾಟ ನಡೆಸಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಡಿಸಿ ವೈ ಆರ್ ಮೋಹನ್ ಎಚ್ಚರಿಸಿದರು.
ಕಾರವಾರದಲ್ಲಿ ₹21 ಲಕ್ಷ ಮೌಲ್ಯದ ಅಕ್ರಮ ಮದ್ಯ ನಾಶ
Last Updated : Jun 10, 2020, 6:53 PM IST