ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮೆರೆದಿದ್ದು, ಇಂದು ಒಂದೇ ದಿನ 8 ಮಂದಿ ಸಾವನ್ನಪ್ಪಿದ್ದು, 206 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇಂದು ಪತ್ತೆಯಾದ ಸೋಂಕಿತರ ಪೈಕಿ ಕಾರವಾರದಲ್ಲಿ 35, ಕುಮಟಾದಲ್ಲಿ 17, ಅಂಕೋಲಾ 45, ಹೊನ್ನಾವರದಲ್ಲಿ 6, ಶಿರಸಿಯಲ್ಲಿ 21, ಸಿದ್ದಾಪುರ 9, ಯಲ್ಲಾಪುರದಲ್ಲಿ 10, ಮುಂಡಗೋಡಿನಲ್ಲಿ 31, ಹಳಿಯಾಳದಲ್ಲಿ 29 ಹಾಗೂ ಜೊಯಿಡಾದ 3 ಮಂದಿಗೆ ಸೋಂಕು ದೃಢಪಟ್ಟಿದೆ.
ಇನ್ನು ಕಾರವಾರದಲ್ಲಿ 4, ಅಂಕೋಲಾ 5, ಕುಮಟಾದಲ್ಲಿ 9, ಶಿರಸಿ 4, ಸಿದ್ದಾಪುರ 18, ಯಲ್ಲಾಪುರ 32, ಮುಂಡಗೋಡ 14, ಹಳಿಯಾಳದಲ್ಲಿ 18 ಹಾಗೂ ಜೊಯಿಡಾದಲ್ಲಿ ಇಬ್ಬರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಕೊರೊನಾಗೆ ಜಿಲ್ಲೆಯಲ್ಲಿ ಇಂದು ಒಂದೇ ದಿನ 8 ಮಂದಿ ಸಾವನ್ನಪ್ಪಿದ್ದಾರೆ. ಕಾರವಾರ 1, ಕುಮಟಾ 2, ಹೊನ್ನಾವರ 1, ಸಿದ್ದಾಪುರ 1, ಹಳಿಯಾಳ 2 ಹಾಗೂ ಜೊಯಿಡಾದ ಇಬ್ಬರು ಸಾವನ್ನಪ್ಪಿದ್ದಾರೆ. ಈವರೆಗೆ ಜಿಲ್ಲೆಯ 6542 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 4636 ಮಂದಿ ಗುಣಮುಖರಾಗಿದ್ದಾರೆ. 1041 ಮಂದಿ ಹೋಮ್ ಐಸೋಲೇಶನ್ ಹಾಗೂ 791 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಟ್ಟು 1832 ಮಂದಿ ಸಕ್ರಿಯ ಸೋಂಕಿತರಿದ್ದಾರೆ.