ಕಾರವಾರ: ಮೀನುಗಾರಿಕೆ ನಡೆಸುವ ಉದ್ದೇಶದಿಂದ ವಾಹನದಲ್ಲಿ ತರಲಾಗಿದ್ದ ಕೇರಳ ಮೂಲದ ಎರಡು ಬೋಟ್ಗಳನ್ನು ದಾಖಲೆ ಇಲ್ಲದ ಹಿನ್ನೆಲೆಯಲ್ಲಿ ವಶಪಡಿಸಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಕಾರವಾರದಲ್ಲಿ ದಾಖಲೆ ಇಲ್ಲದ ಕೇರಳ ಮೂಲದ 2 ಬೋಟ್ ಸೀಜ್..
ಮೀನುಗಾರಿಕೆ ನಡೆಸುವ ಉದ್ದೇಶದಿಂದ ವಾಹನದಲ್ಲಿ ತರಲಾಗಿದ್ದ ಕೇರಳ ಮೂಲದ ಎರಡು ಬೋಟ್ಗಳನ್ನು ದಾಖಲೆ ಇಲ್ಲದ ಹಿನ್ನಲೆಯಲ್ಲಿ ವಶಪಡಿಸಿಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.
ಕೇರಳ ಮೂಲದ 2 ಬೋಟ್ ವಶಕ್ಕೆ
ನಗರದ ಬೈತಖೋಲ ಬಂದರಿನಲ್ಲಿ ಕೇರಳ ಮೂಲದ ವಾಹನದಲ್ಲಿ ಬೋಟುಗಳನ್ನು ತೆಗೆದುಕೊಂಡು ಬರಲಾಗಿತ್ತು. ಬಂದರಿನಲ್ಲಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಬೋಟುಗಳ ದಾಖಲೆ ಪರಿಶೀಲನೆಗೆ ತೆರಳಿದ್ದು, ಈ ವೇಳೆ ಕೇರಳ ಮೂಲದ ಎರಡು ದೋಣಿಗಳಿಗೆ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡು ಬಂದಿತ್ತು.ಈ ಹಿನ್ನೆಲೆ ಬೋಟುಗಳಿಗೆ ಸೇರಿದ್ದ ಎರಡು ಇಂಜಿನ್ಗಳನ್ನು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.