ಶಿರಸಿ: ಅಂದಾಜು 5 ಕೋಟಿ ರೂ. ಬೆಲೆ ಬಾಳುವ ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಅನ್ನು ಶಿರಸಿ ಪೊಲೀಸರು ಕಳೆದ ರಾತ್ರಿ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.
₹5 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನ, ಇಬ್ಬರ ಬಂಧನ - shirasi latest news
ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡಲು ಯತ್ನಿಸಿದ್ದ ಬೆಳಗಾವಿಯ ಸಂತೋಷ್ ಕಾಮತ್ ಮತ್ತು ಶಿರಸಿಯ ರಾಜೇಶ್ ಪೂಜಾರಿಯನ್ನು ಶಿರಸಿ ನಗರ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ಅಂಬರ್ ಗ್ರೀಸ್ ಮಾರಾಟ ಪ್ರಕರಣ
ಬೆಳಗಾವಿಯಿಂದ ತಿಮಿಂಗಲ ವಾಂತಿಯನ್ನು ತಂದು ಶಿರಸಿಯಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಶಿರಸಿ ನಗರದಲ್ಲಿ ಸುಮಾರು 5 ಕೆ.ಜಿ ತಿಮಿಂಗಲ ವಾಂತಿ ವಶಕ್ಕೆ ಪಡೆದರು. ಬೆಳಗಾವಿಯ ಸಂತೋಷ್ ಕಾಮತ್ ಮತ್ತು ಶಿರಸಿಯ ರಾಜೇಶ್ ಪೂಜಾರಿಯನ್ನು ಬಂಧಿಸಲಾಗಿದೆ. ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬಡವರ ಮನೆ ದೀಪ ಬೆಳಗಿಸ್ತಾರೆ ಅಥಣಿಯ ರೈತ ದಂಪತಿ: ದೀಪಾವಳಿಗೆ ಮಾನವೀಯ ಕಾರ್ಯ