ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ; ಕೊರೊನಾಗೆ ಇಬ್ಬರು ಬಲಿ.. 85 ಮಂದಿಗೆ ಸೋಂಕು - ಉತ್ತರಕನ್ನಡ ಲೆಟೆಸ್ಟ್ ನ್ಯೂಸ್

ಮಹಾಮಾರಿ ಕೊರೊನಾ ಸೋಂಕಿಗೆ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ. 85 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 90 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

Uttarakannada corona case
Uttarakannada corona case

By

Published : Jul 26, 2020, 6:45 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 85 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಮತ್ತು 90 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಅಲ್ಲದೇ ಇಬ್ಬರು ಮೃತಪಟ್ಟಿದ್ದಾರೆ.

ಇಂದು ಪತ್ತೆಯಾದ ಸೋಂಕಿತರ ಪೈಕಿ ಹಳಿಯಾಳದಲ್ಲಿ 26, ಕುಮಟಾ, ಕಾರವಾರದಲ್ಲಿ ತಲಾ 13, ಭಟ್ಕಳದಲ್ಲಿ 11, ಶಿರಸಿಯಲ್ಲಿ 9, ಅಂಕೋಲಾದಲ್ಲಿ 5, ಹೊನ್ನಾವರದಲ್ಲಿ 4, ಮುಂಡಗೋಡದಲ್ಲಿ 3, ಯಲ್ಲಾಪುರದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಹಳಿಯಾಳದಲ್ಲಿ 44, ಕುಮಟಾದಲ್ಲಿ 18, ಹೊನ್ನಾವರದಲ್ಲಿ 13, ಸಿದ್ದಾಪುರ, ಯಲ್ಲಾಪುರದಲ್ಲಿ ತಲಾ 4, ಮುಂಡಗೋಡದಲ್ಲಿ 3, ಜೊಯಿಡಾ ಹಾಗೂ ಕಾರವಾರದಲ್ಲಿ ತಲಾ ಎರಡು ಮಂದಿ ಸಂಪೂರ್ಣ ಗುಣಮುಖರಾಗಿ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 1753 ಸೋಂಕಿತರು ಪತ್ತೆಯಾಗಿದ್ದು, 936 ಮಂದಿ ಗುಣಮುಖರಾಗಿದ್ದಾರೆ. ಹಳಿಯಾಳದಲ್ಲಿಂದು ಇಬ್ಬರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಸದ್ಯ 716 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details