ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ 180 ಮಂದಿಗೆ ಕೊರೊನಾ; 124 ಮಂದಿ ಗುಣಮುಖ - Latest Uttara Kannada News

ಉತ್ತರಕನ್ನಡ ಜಿಲ್ಲೆಯ ಇಂದಿನ ಕೊರೊನಾ ಸೋಂಕಿತರ ಅಂಕಿ-ಅಂಶ ಹೀಗಿದೆ...

180 new corona cases found in Uttara Kannada
ಸಂಗ್ರಹ ಚಿತ್ರ

By

Published : Sep 21, 2020, 6:44 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 180 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 124 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಸೋಂಕು ಪತ್ತೆಯಾದ ಪೈಕಿ ಕಾರವಾರ 44, ಅಂಕೋಲಾ 19, ಕುಮಟಾ 50, ಹೊನ್ನಾವರ 5, ಭಟ್ಕಳ 3, ಶಿರಸಿ 29, ಮುಂಡಗೋಡ 23, ಹಳಿಯಾಳದ 7 ಮಂದಿಗೆ ಸೋಂಕು ಧೃಡಪಟ್ಟಿದೆ. ಇನ್ನು ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರ 10, ಹೊನ್ನಾವರ 2, ಶಿರಸಿ 1, ಜೊಯಿಡಾ 3 ಹಾಗೂ ಹಳಿಯಾಳದ 8 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸಂಗ್ರಹ ಚಿತ್ರ

ಈವರೆಗೆ ಜಿಲ್ಲೆಯಲ್ಲಿ ಒಟ್ಟು 8397 ಪ್ರಕರಣಗಳು ಪತ್ತೆಯಾಗಿದ್ದು, 6036 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 103 ಮಂದಿ ಸಾವನ್ನಪ್ಪಿದ್ದು, 2258 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details