ಕರ್ನಾಟಕ

karnataka

ETV Bharat / state

ಯಲ್ಲಾಪುರದಲ್ಲಿ ಪೊಲೀಸ್ ವಾಹನ ಪಲ್ಟಿ: 16 ಜನರಿಗೆ ಗಾಯ - ಯಲ್ಲಾಪುರದಲ್ಲಿ ಪೊಲೀಸ್ ವಾಹನ ಪಲ್ಟಿ

ಯಲ್ಲಾಪುರ-ಮುಂಡಗೋಡ ರಸ್ತೆಯ ಕುಚಗಾಂವ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಪಲ್ಟಿಯಾಗಿದ್ದು, ವ್ಯಾನ್​ನಲ್ಲಿದ್ದ 16 ಮಂದಿ ಗಾಯಗೊಂಡಿದ್ದಾರೆ.

16 people injured in accident
ಯಲ್ಲಾಪುರದಲ್ಲಿ ಪೊಲೀಸ್ ವಾಹನ ಪಲ್ಟಿ

By

Published : Jan 1, 2021, 6:31 PM IST

ಕಾರವಾರ:ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ವ್ಯಾನ್ ಪಲ್ಟಿಯಾದ ಪರಿಣಾಮ 16 ಜನ ಗಾಯಗೊಂಡಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

ಯಲ್ಲಾಪುರ-ಮುಂಡಗೋಡ ರಸ್ತೆಯ ಕುಚಗಾಂವ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ಪಲ್ಟಿಯಾಗಿದ್ದು, ವಿದ್ಯುತ್ ಕಂಬಕ್ಕೆ ಬಡಿದಿದೆ. ಪರಿಣಾಮ ಮೂರು ಕಂಬಗಳು ಮುರಿದಿದ್ದು, ಅದೃಷ್ಟವಶಾತ್ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ಆದರೆ ವ್ಯಾನ್​ನಲ್ಲಿದ್ದ 16 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಾವೇರಿ ಜಿಲ್ಲಾ ಪೊಲೀಸ್ ಠಾಣೆಗೆ ಸೇರಿದ ವಾಹನ ಇದಾಗಿದೆ. ಕಚೇರಿ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ವಾಹನದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ABOUT THE AUTHOR

...view details