ಕರ್ನಾಟಕ

karnataka

ETV Bharat / state

ಈ ಚುನಾವಣೆಯಲ್ಲಿ 15 ಸ್ಥಾನ ನಾವೇ ಗೆಲ್ತೀವಿ.. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಶ್ವಾಸ - ಯಲ್ಲಾಪುರ ಉಪಚುನಾವಣೆ

ಮೂರುವರೆ ವರ್ಷ ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಾರೆ ಎಂದು ಅರಿವಾಗಿರುವ ಕಾರಣ ಕಾಂಗ್ರೆಸ್ ಹತಾಶವಾಗಿದೆ ಎಂದು ಯಲ್ಲಾಪುರದಲ್ಲಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.

dfgvvf
15 ಸ್ಥಾನ ನಾವೇ ಗೆಲ್ತಿವಿ,ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಶ್ವಾಸ

By

Published : Dec 3, 2019, 1:57 PM IST

ಶಿರಸಿ:ಹತಾಶವಾಗಿರುವ ಕಾಂಗ್ರೆಸ್ ಬಿಜೆಪಿ ಸ್ಥಿರ ಸರ್ಕಾರ ನೀಡುತ್ತದೆ ಎಂಬ ಭಯದಲ್ಲಿ ಅಪಪ್ರಚಾರದಲ್ಲಿ ತೊಡಗಿದೆ. ಚುನಾವಣೆಯಲ್ಲಿ 15ಕ್ಕೆ 15 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಯಲ್ಲಾಪುರದಲ್ಲಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ..
ಆದರೆ, ನಾವು ವಿಶ್ವಾಸದಿಂದ ಇದ್ದೇವೆ. ನಮ್ಮ ಸರ್ಕಾರ ಮುಂದುವರೆಯುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.‌ ಯಲ್ಲಾಪುರ ಕ್ಷೇತ್ರದಲ್ಲಿ ಮನೆ ಮನೆಗೆ ಭೇಟಿ ನೀಡಿದ್ದೇವೆ. 231 ಬೂತ್​ಗಳ ಕುರಿತು ಚರ್ಚೆ ಮಾಡಿದ್ದೇವೆ. 58 ಶಕ್ತಿ ಕೇಂದ್ರ ಹಾಗೂ 9 ಮಹಾಶಕ್ತಿ ಕೇಂದ್ರ ಭೇಟಿ ಮಾಡಿದ ಅನುಭವದ ಆಧಾರದಲ್ಲಿ ಸ್ಪಷ್ಟವಾಗಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‌ಬಿಜೆಪಿ ಹಣ, ಹೆಂಡ ಹಂಚಲಿದೆ ಎಂಬ ಮಾಜಿ ಸಚಿವ ಆರ್‌ ವಿ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಕೋಟಾ, ಯಲ್ಲಾಪುರದಲ್ಲಿ ನಮ್ಮ ಗೆಲುವು ನಿಶ್ಚಿತವಾಗಿರುವ ಕಾರಣ ದೇಶಪಾಂಡೆ ಇಂತಹ ಮಾತು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ABOUT THE AUTHOR

...view details