ಕರ್ನಾಟಕ

karnataka

ETV Bharat / state

ಭಟ್ಕಳ: 136 ಲೀಟರ್ ಅಕ್ರಮ ಮದ್ಯ ನಾಶ - ಅಕ್ರಮ ಮದ್ಯ ನಾಶ

ಅಬಕಾರಿ ಇಲಾಖೆ ಸಿಬ್ಬಂದಿ ಇತ್ತೀಚೆಗೆ ದಾಳಿ ಮಾಡಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ಇಲ್ಲಿನ ಸಾಗರ ರಸ್ತೆಯ ಅರಣ್ಯ ಇಲಾಖೆಯ ಜಾಗದಲ್ಲಿ ನಾಶ ಮಾಡಲಾಯಿತು.

Illegal alcohol destroyed
Illegal alcohol destroyed

By

Published : Jul 18, 2020, 10:20 PM IST

​​​​​​ಭಟ್ಕಳ: ಅಬಕಾರಿ ಇಲಾಖೆ ಸಿಬ್ಬಂದಿ ಕೊರೊನಾ ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಕೈಗೊಂಡ ಕಾರ್ಯಾಚರಣೆಯಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ದಾಳಿ ಮಾಡಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ಇಲ್ಲಿನ ಸಾಗರ ರಸ್ತೆಯ ಅರಣ್ಯ ಇಲಾಖೆಯ ಜಾಗದಲ್ಲಿ ನಾಶ ಮಾಡಲಾಯಿತು.

ಈ ರೀತಿ ನಾಶ ಮಾಡಿರುವುದರಲ್ಲಿ ಭಾರತೀಯ ಮದ್ಯ, ಬಿಯರ್, ಗೋವಾ ಫೆನ್ನಿ, ಗೋವಾ ಸಾರಾಯಿ, ಕಳ್ಳಭಟ್ಟಿ ಸಾರಾಯಿ, ಗೇರು ಹಣ್ಣಿನ ಸಾರಾಯಿ ಸೇರಿದೆ. ಸುಮಾರು 136 ಲೀಟರ್‌ ಮದ್ಯದ ಅಂದಾಜು ಮೊತ್ತ 47,500 ರೂ ಎಂಬ ಮಾಹಿತಿ ಇದೆ.

ABOUT THE AUTHOR

...view details