ಕರ್ನಾಟಕ

karnataka

By

Published : Aug 29, 2020, 6:37 PM IST

ETV Bharat / state

ಉತ್ತರಕನ್ನಡದಲ್ಲಿ 133 ಮಂದಿಗೆ ಕೊರೊನಾ, 50 ಮಂದಿ ಗುಣಮುಖ

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ವಿವರ ಇಂತಿದೆ.

ಉತ್ತರಕನ್ನಡ
ಉತ್ತರಕನ್ನಡ

ಕಾರವಾರ:ಜಿಲ್ಲೆಯಲ್ಲಿಂದು 133 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 50 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 12, ಅಂಕೋಲಾ 14, ಕುಮಟಾ 1, ಹೊನ್ನಾವರ 11, ಭಟ್ಕಳ 19, ಶಿರಸಿ 14, ಸಿದ್ದಾಪುರ 2, ಯಲ್ಲಾಪುರ 4, ಮುಂಡಗೋಡ 21, ಹಳಿಯಾಳ 26 ಹಾಗೂ ಜೊಯಿಡಾದಲ್ಲಿ 9 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,751 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಹಳಿಯಾಳದ 17, ಯಲ್ಲಾಪುರ 3, ಶಿರಸಿ 8, ಹೊನ್ನಾವರ 6, ಕುಮಟಾ 5, ಅಂಕೋಲಾದ 1 ಹಾಗೂ ಕಾರವಾರದ 10 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 3,484 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 52 ಮಂದಿ ಸಾವನ್ನಪ್ಪಿದ್ದು, 1215 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details