ಕರ್ನಾಟಕ

karnataka

ETV Bharat / state

ಉ.ಕನ್ನಡದಲ್ಲಿ 133 ಮಂದಿ ಗುಣಮುಖ: ಮತ್ತೆ 131ಮಂದಿಗೆ ಸೋಂಕು - Uttarakannada corona latest news

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 131 ಮಂದಿಗೆ ಕೊರೊನಾ ವೈರಸ್‌ ಸೋಂಕು ತಗುಲಿದೆ. ಇದರ ಜೊತೆಗೆ 133 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Uttarakannada
Uttarakannada

By

Published : Aug 19, 2020, 6:29 PM IST

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 131 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

ಮುಂಡಗೋಡದಲ್ಲಿ 33, ಹಳಿಯಾಳ 22, ಯಲ್ಲಾಪುರ 18, ಶಿರಸಿ- ಅಂಕೋಲಾದಲ್ಲಿ ತಲಾ 13, ಕುಮಟಾ 06, ಹೊನ್ನಾವರ 6, ಭಟ್ಕಳ 12, ಸಿದ್ದಾಪುರ 05, ಕಾರವಾರ 2 ಹಾಗೂ ಜೊಯಿಡಾದ ಒಬ್ಬರಿಗೆ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,579 ಕ್ಕೆ ಏರಿಕೆಯಾಗಿದೆ.

133 ಮಂದಿ ಗುಣಮುಖ:

ಜಿಲ್ಲೆಯಲ್ಲಿಂದು 133 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 2,666 ಕ್ಕೆ ಏರಿಕೆಯಾಗಿದೆ.

ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದಲ್ಲಿ 5, ಅಂಕೋಲಾ 2, ಕುಮಟಾ 49, ಭಟ್ಕಳ 47, ಶಿರಸಿ 8, ಸಿದ್ದಾಪುರ 1, ಮುಂಡಗೋಡ 6, ಹಳಿಯಾಳ 14, ಜೊಯಿಡಾದಲ್ಲಿ ಒಬ್ಬರು ಸೋಂಕಿನಿಂದ ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ 35 ಮಂದಿ ಸಾವನ್ನಪ್ಪಿದ್ದು, 878 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details