ಕರ್ನಾಟಕ

karnataka

ETV Bharat / state

ಉತ್ತರಕನ್ನಡದಲ್ಲಿ 130 ಮಂದಿ ಗುಣಮುಖ : ಮತ್ತೆ 119 ಮಂದಿಗೆ ಸೋಂಕು - Uttarakannada Corona latest news

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಕುರಿತ ಮಾಹಿತಿ ಇಲ್ಲಿದೆ.

Uttarakannada
Uttarakannada

By

Published : Sep 2, 2020, 6:46 PM IST

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 130 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಮತ್ತೆ 119 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಸೋಂಕು ಪತ್ತೆಯಾದ ಪೈಕಿ ಕಾರವಾರ 8, ಅಂಕೋಲಾ 6, ಕುಮಟಾ 21, ಹೊನ್ನಾವರ 10, ಭಟ್ಕಳ 9, ಶಿರಸಿ 5, ಸಿದ್ದಾಪುರ 11, ಯಲ್ಲಾಪುರ 17, ಮುಂಡಗೋಡ 9, ಹಳಿಯಾಳ 13 ಹಾಗೂ ಜೊಯಿಡಾದ 10 ಮಂದಿಯಲ್ಲಿ ಸೋಂಕು ಧೃಡಪಟ್ಟಿದೆ. ಈ ಮೂಲಕ‌ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5188 ಕ್ಕೆ ಏರಿಕೆಯಾಗಿದೆ.

ಇನ್ನು ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರ 10, ಅಂಕೋಲಾ 12, ಕುಮಟಾ 25, ಹೊನ್ನಾವರ 17, ಭಟ್ಕಳ 8, ಶಿರಸಿ 14, ಸಿದ್ದಾಪುರ 5, ಯಲ್ಲಾಪುರ 11, ಮುಂಡಗೋಡ 4, ಜೊಯಿಡಾ 6 ಹಾಗೂ ಹಳಿಯಾಳದ 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 3941 ಜನರು ಗುಣಮುಖರಾದಂತಾಗಿದೆ.

ಜಿಲ್ಲೆಯಲ್ಲಿ ಒಟ್ಟು 54 ಮಂದಿ ಸಾವನ್ನಪ್ಪಿದ್ದು, 1193 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details