ಕರ್ನಾಟಕ

karnataka

By

Published : Jul 8, 2020, 6:40 PM IST

ETV Bharat / state

ಭಟ್ಕಳದಲ್ಲಿ ಇಂದು ಕಾನ್ಸ್​ಟೇಬಲ್​​​​ ಪತ್ನಿ, ಒಂದು ವರ್ಷದ ಮಗು ಸೇರಿ 13 ಮಂದಿಗೆ ಕೊರೊನಾ

ಭಟ್ಕಳ ತಾಲೂಕಿನಲ್ಲಿ ಕಾನ್ಸ್​ಟೇಬಲ್​​​ ಪತ್ನಿ ಮತ್ತು ಒಂದು ವರ್ಷದ ಮಗು ಸೇರಿ 13 ಮಂದಿಗೆ ಕೊರೊನಾ ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 208ಕ್ಕೆ ಏರಿದೆ.

Bantkal
ಬಂಟ್ವಾಳ ಪಟ್ಟಣ

ಭಟ್ಕಳ: ತಾಲೂಕಿನಲ್ಲಿ 13 ಸೋಂಕಿತರು ಪತ್ತೆಯಾಗಿದ್ದು, ವೃದ್ಧನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ತಾಲೂಕಿನ 43, 56 ವರ್ಷದ ಮಹಿಳೆಯರು, 24, 25 ವರ್ಷದ ಯುವತಿಯರು, 13, 9, 13 ವರ್ಷದ ಬಾಲಕಿಯರು, 5, 6 ವರ್ಷದ ಬಾಲಕರು, 24 ವರ್ಷದ ಯುವಕ, 62 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.

ಅಲ್ಲದೆ ಒಂದು ವರ್ಷದ ಗಂಡು ಮಗು ಹಾಗೂ ಪೊಲೀಸ್ ಕಾನ್ಸ್​ಟೇಬಲ್​​ವೊಬ್ಬರ​ 26 ವರ್ಷದ ಪತ್ನಿಗೆ ಸೋಂಕಿರುವುದು ಪತ್ತೆಯಾಗಿದೆ. ಖಾಸಗಿ ಆಸ್ಪತ್ರೆಯ ನರ್ಸ್​​​ನಿಂದ ಸೋಂಕು ತಗುಲಿರಬಹುದೆಂಬ ಮಾಹಿತಿ ಇದೆ.

ಇಂದು ಸೋಂಕು ಪತ್ತೆಯಾದ 62 ವರ್ಷದ ವೃದ್ಧ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಭಟ್ಕಳದಲ್ಲಿ ಈವರೆಗೂ ಪತ್ತೆಯಾದ 208 ಸೋಂಕಿತರ ಪೈಕಿ 58 ಮಂದಿ ಗುಣಮುಖರಾಗಿದ್ದಾರೆ. 149 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details