ಕರ್ನಾಟಕ

karnataka

By

Published : Aug 21, 2020, 6:33 PM IST

ETV Bharat / state

ಉತ್ತರಕನ್ನಡದಲ್ಲಿ 126 ಮಂದಿ ಸೋಂಕಿನಿಂದ ಗುಣಮುಖ: ಮತ್ತೆ 89 ಕೇಸ್ ಪತ್ತೆ

ಉತ್ತರಕನ್ನಡ‌ ಜಿಲ್ಲೆಯ ಇಂದಿನ ಕೊರೊನಾ ಬುಲೆಟಿನ್‌ ಹೀಗಿದೆ..

Uttarakannada
Uttarakannada

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ 89 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದರ ಜೊತೆಗೆ 126 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇಂದು ಪತ್ತೆಯಾದ ಸೋಂಕಿತ ಪ್ರಕರಣಗಳ ಪೈಕಿ ಹಳಿಯಾಳದಲ್ಲಿ 26, ಕಾರವಾರ 13, ಹೊನ್ನಾವರ 18, ಕುಮಟಾ 5, ಭಟ್ಕಳ 10, ಶಿರಸಿ 12, ಯಲ್ಲಾಪುರದ 5 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,776ಕ್ಕೆ ಏರಿಕೆಯಾಗಿದೆ.

ಗುಣಮುಖರಾದವರ ವಿವರ:

ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಹಳಿಯಾಳದ 42, ಶಿರಸಿ 13, ಹೊನ್ನಾವರ 7, ಕಾರವಾರ 14, ಕುಮಟಾ 3, ಭಟ್ಕಳ 11, ಸಿದ್ದಾಪುರ 22, ಯಲ್ಲಾಪುರ 1, ಮುಂಡಗೋಡ 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಟ್ಟು 126 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ‌. ಈ ಮೂಲಕ ಜಿಲ್ಲೆಯಲ್ಲಿ 2,907 ಮಂದಿ ಗುಣಮುಖರಾಗಿದ್ದಾರೆ.

ಒಟ್ಟು 38 ಮಂದಿ ಸಾವನ್ನಪ್ಪಿದ್ದು, 831 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details