ಕರ್ನಾಟಕ

karnataka

ETV Bharat / state

12 ಕುರಿಗಳ ಅನುಮಾನಾಸ್ಪದ ಸಾವು: ವಿಷ ಪ್ರಾಸನದ ಶಂಕೆ - ಉತ್ತರ ಕನ್ನಡ ಜಿಲ್ಲೆಯ ಶಿರಸಿ

ಶಿರಸಿಯಲ್ಲಿ ವಿಷ ಪ್ರಾಸನವಾಗಿ 12 ಕುರಿಗಳು ದಾರುಣವಾಗಿ ಸಾವನ್ನಪ್ಪಿದ್ದು, ಸುಮಾರು 1.5 ಲಕ್ಷ ನಷ್ಟವಾಗಿದೆ ಎಂದು ಕುರಿಗಳ ಮಾಲೀಕ ತಿಳಿಸಿದ್ದಾರೆ.

ವಿಶಪ್ರಾಸನದ ಶಂಕೆ

By

Published : Oct 14, 2019, 9:32 PM IST

ಶಿರಸಿ : ವಿಷ ಪ್ರಾಶನದಿಂದ 12 ಕುರಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ, ತಾಲೂಕಿನ ಇಸಳೂರಿನ‌ ವಿದ್ಯಾನಗರದಲ್ಲಿ ನಡೆದಿದೆ.

ಇಸಳೂರಿನ ಓಂಕಾರಪ್ಪ ಕೊರಚರ ಅವರಿಗೆ ಸೇರಿದ 6 ಕುರಿ ಹಾಗೂ 6 ಮೇಕೆಗಳು ಮೃತಪಟ್ಟಿವೆ. ಹೆಣ್ಣು ಕುರಿಗಳು ಮರಿ ಹಾಕುವ ಹಂತದಲ್ಲಿದ್ದ ಕಾರಣ ಹೊಟ್ಟೆಯಲ್ಲಿಯೇ ಮರಿಗಳೂ ಸಹ ಮೃತಪಟ್ಟಿವೆ. ಇವುಗಳ ಸಾವು ಅನುಮಾನಾಸ್ಪದವಾಗಿದ್ದು, ವಿಷ ಪ್ರಾಸನದಿಂದ ಸಾವನ್ನಪ್ಪಿರುವುದಾಗಿ ಮಾಲೀಕರು ತಿಳಿಸಿದ್ದಾರೆ. ಕುರಿಗಳ ಸಾವಿನಿಂದ ಸುಮಾರು 1.5ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ವಿಶಪ್ರಾಸನವಾಗಿ 12 ಕುರಿಗಳು ದಾರುಣ ಸಾವು

ಕುರಿಗಳ ಸಾಕಾಣಿಕೆ ಮಾಡುವ ಓಂಕಾರಪ್ಪ ಮನೆಯಲ್ಲಿ ಒಟ್ಟು 45 ಕುರಿಗಳಿದ್ದು, ಅವುಗಳಿಂದಲೇ ಜೀವನ ಸಾಗಿಸಬೇಕಾಗಿದೆ. 12 ಕುರಿಗಳ ಸಾವು ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಅವರು ಅಳಲು ತೊಡಿಕೊಂಡಿದ್ದಾರೆ.

ಇನ್ನು ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ವೈದ್ಯ ಡಾ.ಗಣೇಶ್ ಮತ್ತಿತ್ತರರು ಭೇಟಿ ನೀಡಿ ಕುರಿಗಳ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸುವ ಕೆಲಸ ಆಗಬೇಕು ಎಂದು ಕುಟುಂಬಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ‌

ABOUT THE AUTHOR

...view details