ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಸಿಕ್ತು 12 ಅಡಿ ಹೆಬ್ಬಾವು... ಅದರ ರಕ್ಷಣೆ ಹೇಗಿತ್ತು ಗೊತ್ತಾ? ವಿಡಿಯೋ - ಕಾರವಾರದಲ್ಲಿ 12  ಅಡಿ ಉದ್ಧದ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ಆಹಾರ ಅರಸಿ ನಾಡಿಗೆ ಬಂದಿದ್ದ 12  ಅಡಿ ಉದ್ಧದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಕಾರವಾರದ ಪಾಟ್ನೇಕರ್ ವಾಡಾದಲ್ಲಿ ಶನಿವಾರ ರಾತ್ರಿ ನಡೆದಿದೆ.

12-foot-python-found-in-karwar
ಕಾರವಾರದಲ್ಲಿ ಸಿಕ್ತು 12 ಅಡಿ ಹೆಬ್ಬಾವು

By

Published : Feb 2, 2020, 3:19 AM IST

ಕಾರವಾರ:ಆಹಾರ ಅರಸಿ ನಾಡಿಗೆ ಬಂದಿದ್ದ 12 ಅಡಿ ಉದ್ಧದ ಬೃಹತ್ ಗಾತ್ರದ ಹೆಬ್ಬಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಕಾರವಾರದ ಪಾಟ್ನೇಕರ್ ವಾಡಾದಲ್ಲಿ ಶನಿವಾರ ರಾತ್ರಿ ನಡೆದಿದೆ.

ಕಾರವಾರದಲ್ಲಿ ಸಿಕ್ತು 12 ಅಡಿ ಹೆಬ್ಬಾವು.

ಪಾಟ್ನೇಕರ್ ವಾಡಾದ ಸರ್ಕಾರಿ ಐಟಿಐ ಕಾಲೇಜು ಬಳಿ ಆಹಾರ ಅರಸುತ್ತ ರಸ್ತೆಯಂಚಿನ ಪೊದೆಯೊಂದರಲ್ಲಿ ತೆರಳುತ್ತಿದ್ದಾಗ ಗಮನಿಸಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಉರಗ ಪ್ರೇಮಿ ಅರಣ್ಯ ರಕ್ಷಕ ಗೋಪಾಲ ನಾಯ್ಕ ಹೆಬ್ಬಾವನ್ನು ಹಿಡಿದು ಗೋಣಿ ಚೀಲದಲ್ಲಿ ತುಂಬಿಕೊಂಡು ತೆರಳಿದ್ದು ಭಾನುವಾರ ಕಾಡಿಗೆ ಬಿಡಲಿದ್ದಾರೆ.

ಇನ್ನು ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಭಯಭೀತರಾಗಿದ್ದ ಜನರು ಹಾವನ್ನು ಹಿಡಿಯುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಹೆಬ್ಬಾವನ್ನು ಸೆರೆ ಹಿಡಿಯುವ ದೃಶ್ಯವನ್ನು ನೋಡುವುದಕ್ಕೆ ನೂರಾರು ಸಂಖ್ಯೆಯಲ್ಲಿ ಜರರು ಆಗಮಿಸಿದ್ದರು.

ABOUT THE AUTHOR

...view details