ಕರ್ನಾಟಕ

karnataka

ETV Bharat / state

ಕಾರವಾರದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಂಡು ದಂಗಾದ ಜನ!

ಕೊನೆಗೆ ಮೂರ್ನಾಲ್ಕು ಮಂದಿ ಸ್ಥಳೀಯರೇ ಹೆಬ್ಬಾವನ್ನ ಹಿಡಿಯಲು ಮುಂದಾಗಿದ್ದರು. ಭಾರಿ ಗಾತ್ರವಿದ್ದ ಕಾರಣ ಕಾಲುವೆಯಿಂದ ಮೇಲೆತ್ತುವುದಕ್ಕೇ ಹರಸಾಹಸ ಪಡುವಂತಾಯಿತು. ಕೊನೆಗೂ ಹೆಬ್ಬಾವನ್ನು ಹಿಡಿದು ಚೀಲದಲ್ಲಿ ತುಂಬಿದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ..

python
ಹೆಬ್ಬಾವು ಸೆರೆ

By

Published : Sep 28, 2021, 10:29 PM IST

ಕಾರವಾರ/ಉತ್ತರಕನ್ನಡ :12 ಅಡಿ ಉದ್ದದ ಭಾರಿ ಗಾತ್ರದ ಹೆಬ್ಬಾವೊಂದು ಜನವಸತಿ ಪ್ರದೇಶದ ಕಾಲುವೆಯಲ್ಲಿ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ ಘಟನೆ ನಗರದ ಬೈತಖೋಲ್​​ನಲ್ಲಿ ನಡೆದಿದೆ.

ಹೆಬ್ಬಾವು ಸೆರೆ

ಇಲ್ಲಿನ ಮೀನುಗಾರಿಕಾ ಬಂದರಿನ ಸಮೀಪದ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರದ ಕಾಲುವೆಯಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ನೋಡಿದವರು ಒಮ್ಮೆ ಹೌಹಾರಿದ್ದಾರೆ. ಕಾಡಿನಿಂದ ನಾಡಿನೆಡೆಗೆ ಆಗಮಿಸಿದ್ದ ಹೆಬ್ಬಾವು ಇರುವುದು ತಿಳಿಯುತ್ತಿದ್ದಂತೆ ಜನ ನೋಡಲು ಮುಗ್ಗಿಬಿದ್ದಿದ್ದರು.

ಬಳಿಕ ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರೂ ಯಾರೊಬ್ಬರು ಆಗಮಿಸಿರಲಿಲ್ಲ.ಕೊನೆಗೆ ಮೂರ್ನಾಲ್ಕು ಮಂದಿ ಸ್ಥಳೀಯರೇ ಹೆಬ್ಬಾವನ್ನ ಹಿಡಿಯಲು ಮುಂದಾಗಿದ್ದರು. ಭಾರಿ ಗಾತ್ರವಿದ್ದ ಕಾರಣ ಕಾಲುವೆಯಿಂದ ಮೇಲೆತ್ತುವುದಕ್ಕೇ ಹರಸಾಹಸ ಪಡುವಂತಾಯಿತು. ಕೊನೆಗೂ ಹೆಬ್ಬಾವನ್ನು ಹಿಡಿದು ಚೀಲದಲ್ಲಿ ತುಂಬಿದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ:ರಾತ್ರೋರಾತ್ರಿ ಕೋಟ್ಯಧಿಪತಿಯಾದ ಕ್ಷೌರಿಕ.. 'ಡ್ರೀಮ್​ ಇಲೆವೆನ್​​​'ನಿಂದ ಹಣ ಗೆದ್ದು ಬೀಗಿದ..

ABOUT THE AUTHOR

...view details