ಕಾರವಾರ :ಅಡುಗೆ ಮನೆಯೊಳಗೆ ಅವಿತುಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಉರಗ ಪ್ರೇಮಿ ಅಶೋಕ್ ನಾಯ್ಕ ಎಂಬುವರು ಸೆರೆ ಹಿಡಿದಿದ್ದಾರೆ.
ಅಡುಗೆ ಮನೆಯೊಳಗೆ ಕುಳಿತಿತ್ತು 12 ಅಡಿ ಉದ್ದದ ಕಾಳಿಂಗ ಸರ್ಪ.. - ಗಂಗಾವಳಿ ನದಿ ತೀರದ ಕೋಡ್ಸಣಿ ಗ್ರಾಮ
ಕೂಡಲೇ ಉರಗ ಪ್ರೇಮಿ ಅಶೋಕ ನಾಯ್ಕ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಮಿಸಿದ ಅಶೋಕ ನಾಯ್ಕ, 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ..
ಅಡುಗೆ ಮನೆಯಲ್ಲಿ ಬಂದು ಕುಳಿತಿತ್ತು 12 ಅಡಿ ಉದ್ದದ ಕಾಳಿಂಗ ಸರ್ಪ..!
ಕುಮಟಾ ತಾಲೂಕಿನ ಗಂಗಾವಳಿ ನದಿ ತೀರದ ಕೋಡ್ಸಣಿ ಗ್ರಾಮದ ಜಯಬೀರ ಗೌಡ ಎಂಬುವರ ಅಡುಗೆ ಮನೆಯಲ್ಲಿ ಕಾಳಿಂಗ ಸರ್ಪ ಅವಿತಿತ್ತು. ಮನೆಯವರು ಅಡುಗೆ ಮಾಡಲು ಹೋದ ವೇಳೆ ಹಾವನ್ನು ಕಂಡು ಬೆಚ್ಚಿದ್ದಾರೆ. ಕೂಡಲೇ ಉರಗ ಪ್ರೇಮಿ ಅಶೋಕ ನಾಯ್ಕ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಮಿಸಿದ ಅಶೋಕ ನಾಯ್ಕ, 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ.
ನಿರಂತರ ಮಳೆಯಿಂದಾಗ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಪ್ರವಾಹದಲ್ಲಿ ಕಾಳಿಂಗ ಸರ್ಪ ತೇಲಿ ಬಂದಿರಬಹುದು ಎನ್ನಲಾಗಿದೆ.