ಕಾರವಾರ:ಉತ್ತರ ಕನ್ನಡದಲ್ಲಿ ಕೊರೊನಾ ಸ್ಫೋಟಗೊಂಡ ಬೆನ್ನಲ್ಲೇ ಇಂದು 12 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಯ, ಒಟ್ಟು 177 ಮಂದಿ ಗುಣಮುಖರಾದಂತಾಗಿದೆ.
ಉ.ಕ.ದಲ್ಲಿ ಇಂದು 81 ಜನರಲ್ಲಿ ಕೊರೊನಾ ದೃಢ: 12 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ - ಕೊರೊನಾ ಸೋಂಕಿತರು ಗುಣಮುಖ
ಉತ್ತರ ಕನ್ನಡದಲ್ಲಿ ಇಂದು 12 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ 177 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದೇ ಅವಧಿಯಲ್ಲಿ 81 ಪ್ರಕರಣಗಳು ಪತ್ತೆಯಾಗಿದ್ದು, 269 ಜನ ಸಕ್ರಿಯ ಸೋಂಕಿತರಿದ್ದಾರೆ
ಗುಣಮುಖರಾದವರು
ಶಿರಸಿ ಮೂಲದ ಐವರು, ಭಟ್ಕಳ 2, ಕಾರವಾರ 2, ದಾಂಡೇಲಿ, ಮುಂಡಗೋಡ, ಜೊಯಿಡಾ ಮೂಲದ ತಲಾ ಓರ್ವರು ಡಿಸ್ಚಾರ್ಜ್ ಆಗಿದ್ದಾರೆ. ಅದರಲ್ಲಿ ಓರ್ವ ಯುವತಿ ಇದ್ದು, ಉಳಿದವರೆಲ್ಲರೂ ಪುರುಷರಾಗಿದ್ದಾರೆ.
ಗಂಟಲು ದ್ರವದ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 81 ಪ್ರಕರಣಗಳು ಪತ್ತೆಯಾಗಿದ್ದು, 269 ಜನ ಸಕ್ರಿಯ ಸೋಂಕಿತರಿದ್ದಾರೆ.