ಕರ್ನಾಟಕ

karnataka

ETV Bharat / state

ಭಟ್ಕಳದ 12 ಕೊರೊನಾ ಸೋಂಕಿತರು ಕಾರವಾರ ಮೆಡಿಕಲ್ ಕಾಲೇಜಿಗೆ ಶಿಫ್ಟ್​..

ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆ ಸಂಪರ್ಕದಿಂದಾಗಿ ಭಟ್ಕಳದಲ್ಲಿ ಮೊದಲು ಕಾಣಿಸಿಕೊಂಡಿದ್ದ 14 ವರ್ಷದ ಸೋಂಕಿತೆಯನ್ನು ಮೇ. 7 ರಂದು ಮೆಡಿಕಲ್ ಕಾಲೇಜಿಗೆ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

12 corona patients are shifted to Karwar medical college
12 ಕೊರೊನಾ ಸೋಂಕಿತರು ಕಾರವಾರ ಮೆಡಿಕಲ್ ಕಾಲೇಜಿಗೆ ಶಿಫ್ಟ್​

By

Published : May 9, 2020, 9:54 AM IST

ಕಾರವಾರ :ಭಟ್ಕಳದಲ್ಲಿ ಪತ್ತೆಯಾದ 12 ಕೊರೊನಾ ಸೋಂಕಿತರನ್ನು ಕಾರವಾರದ ಮೆಡಿಕಲ್ ಕಾಲೇಜಿನ ಕೊರೊನಾ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ.

ಭಟ್ಕಳದಿಂದ 4 ಆ್ಯಂಬುಲೆನ್ಸ್‌ಗಳ ಮೂಲಕ 5 ತಿಂಗಳ ಮಗು ಸೇರಿ ಒಟ್ಟು 12 ಜನರನ್ನು ರಾತ್ರಿ ವೇಳೆ ಕೊರೊನಾ ವಾರ್ಡ್​ಗೆ ಶಿಫ್ಟ್‌ ಮಾಡಲಾಗಿದೆ. ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆ ಸಂಪರ್ಕದಿಂದಾಗಿ ಭಟ್ಕಳದಲ್ಲಿ ಮೊದಲು ಕಾಣಿಸಿಕೊಂಡಿದ್ದ 14 ವರ್ಷದ ಸೋಂಕಿತೆಯನ್ನು ಮೇ. 7 ರಂದು ಮೆಡಿಕಲ್ ಕಾಲೇಜಿಗೆ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ, ಇದೀಗ 5 ತಿಂಗಳ‌ ಮಗು ಸೇರಿ 12 ಮಂದಿ ಸೋಂಕಿತರನ್ನು ನೂತನ ಕೋವಿಡ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಮಗುವಿಗೆ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details