ಕಾರವಾರ :ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ 115 ಸೋಂಕಿತರು ಪತ್ತೆಯಾಗಿದ್ದಾರೆ.
ಒಂದೇ ದಿನ 115 ಸೋಂಕಿತರು ಪತ್ತೆ.. ಈವರೆಗೂ 346 ಗುಣಮುಖ - Karawara uttarakannada latest news
ಜಿಲ್ಲೆಯಲ್ಲಿಂದು ಒಂದೇ ದಿನ 115 ಸೋಂಕಿತರು ಪತ್ತೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 1,016 ಸೋಂಕಿತರು ಪತ್ತೆಯಾಗಿದ್ದು, 346 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಸೋಂಕಿತರ ಪೈಕಿ ಇಂದೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ವರದಿಯಾಗಿವೆ. ಈ ಪೈಕಿ ಹಳಿಯಾಳ ತಾಲೂಕಿನಲ್ಲಿಯೇ 52 ಮಂದಿ ಪತ್ತೆಯಾಗಿದ್ದಾರೆ. ಉಳಿದಂತೆ ಕಾರವಾರದಲ್ಲಿ 11, ಭಟ್ಕಳದಲ್ಲಿ 10, ಮುಂಡಗೋಡಿನಲ್ಲಿ 9, ಕುಮಟಾದಲ್ಲಿ 8, ಅಂಕೋಲಾ 8, ಶಿರಸಿಯಲ್ಲಿ7, ಹೊನ್ನಾವರ 6, ಸಿದ್ದಾಪುರ 3, ಯಕ್ಲಾಪುರದಲ್ಲಿ ಒಂದು ಕೊರೊನಾ ಸೋಂಕು ಪ್ರಕರಣ ಪತ್ತೆಯಾಗಿದೆ.
ಇಂದು 24 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅದರಲ್ಲಿ ಭಟ್ಕಳದ 12, ಕುಮಟಾ 6, ಹೊನ್ನಾವರ 5, ಅಂಕೋಲಾದ ಒಬ್ಬರು ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 1,016 ಸೋಂಕಿತರು ಪತ್ತೆಯಾಗಿದ್ದು, 346 ಮಂದಿ ಗುಣಮುಖರಾಗಿದ್ದಾರೆ. 660 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಮಂದಿ ಸಾವನ್ನಪ್ಪಿದ್ದಾರೆ.