ಕರ್ನಾಟಕ

karnataka

ETV Bharat / state

ಬಾಲಕಿ ಅತ್ಯಾಚಾರಕ್ಕೆ ಯತ್ನ: ಅಪರಾಧಿಗೆ 11 ವರ್ಷ ಜೈಲು ಶಿಕ್ಷೆ - ಬಾಲಕಿ ಅತ್ಯಾಚಾರಕ್ಕೆ ಯತ್ನ

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗೆ ನ್ಯಾಯಾಲಯವು 11 ವರ್ಷ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿದೆ.

11-years-in-prison-for-accused-who-attempted-rape-on-girl
ಪೋಕ್ಸೋ ಪ್ರಕರಣ

By

Published : Jan 29, 2021, 4:54 AM IST

ಶಿರಸಿ :ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅಪರಾಧಿಗೆ ಕಾರವಾರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ. ವಿಭಾಗದ ನ್ಯಾಯಾಧೀಶರು 11 ವರ್ಷ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಶಿರಸಿ ತಾಲೂಕಿನ ಹುಲೇಕಲ್‌ನ ನಾಗರಾಜ ಈಶ್ವರ ಪೂಜಾರಿ ಎಂಬಾತ ಆರು ವರ್ಷ ಬಾಲಕಿಯೋರ್ವಳನ್ನು ಪ್ರತಿನಿತ್ಯ ಕರೆದುಕೊಂಡು ಹೋಗಿ ಆಕೆಗೆ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸಿ ಅಲ್ಲೇ ಸಮೀಪದ ಮನೆಯೊಂದಕ್ಕೆ ಕರೆದುಕೊಂಡು ಲೈಂಗಿಕ ಉದ್ದೇಗಕ್ಕೆ ಬಳಸಿಕೊಂಡು, ಬಳಿಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 2014ರ ಡಿಸೆಂಬರ್ 13ರಂದು ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಕುರಿತು ಅಂದಿನ ಶಿರಸಿ ಗ್ರಾಮೀಣ ಠಾಣೆ ಪಿಎಸ್​​ಐ ಜನಾರ್ಧನ ಬೊಬ್ರುವಾಡಕೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಮೇಲೆ ಚಾರ್ಜ್​ ಶೀಟ್ ಸಲ್ಲಿಸಿದ್ದರು.

7 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಾಜಿ ಅನಂತ ನಾಲ್ವಾಡೆ ಅವರು ಆರೋಪಿ ನಾಗರಾಜ ಈಶ್ವರ ಪೂಜಾರಿಗೆ 11 ವರ್ಷ ಶಿಕ್ಷೆ ಹಾಗೂ 20 ಸಾವಿರ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಕುರಿತು ನ್ಯಾಯಾಲಯದ ಪೊಲೀಸ್ ಸಿಬ್ಬಂದಿ ಮಾರುತಿ ವಿಶೇಷ ಪ್ರಯತ್ನ ಮಾಡಿ ಸಾಕ್ಷಿದಾರರನ್ನು ಕರೆಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಸುಭಾಸ್ ಕೈರನ್ ವಾದ ಮಂಡಿಸಿದ್ದಾರೆ.‌

ABOUT THE AUTHOR

...view details