ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಉತ್ತರ ಕನ್ನಡದಲ್ಲಿ ಇಂದು 11 ಕೊರೊನಾ ಕೇಸ್ ಪತ್ತೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 11 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಮುಂಡಗೋಡಿನ ಮೂವರನ್ನ ಹೊರತುಪಡಿಸಿ ಉಳಿದವರು ಮಹಾರಾಷ್ಟ್ರದಿಂದ ವಾಪಸಾದವರು ಎಂದು ತಿಳಿದು ಬಂದಿದೆ.
ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ನ 32 ವರ್ಷದ ಪುರುಷ, 27 ವರ್ಷದ ಯುವಕ, 16 ವರ್ಷದ ಬಾಲಕಿ, ಹಳಿಯಾಳ ತಾಲೂಕಿನ 25 ಹಾಗೂ 23 ವರ್ಷದ ಯುವತಿಯರು, ಹೊನ್ನಾವರದ 28 ವರ್ಷದ ಯುವಕ, ಭಟ್ಕಳದ 29 ವರ್ಷದ ಯುವಕ, ಜೋಯಿಡಾ ತಾಲೂಕಿನ 53 ವರ್ಷದ ವ್ಯಕ್ತಿ, ಶಿರಸಿಯ 55 ವರ್ಷದ ವ್ಯಕ್ತಿ, ದೆಹಲಿಯಿಂದ ದಾಂಡೇಲಿಗೆ ಬಂದಿದ್ದ 50 ವರ್ಷದ ವ್ಯಕ್ತಿ ಹಾಗೂ ಯಲ್ಲಾಪುರದ 3 ವರ್ಷದ ಹೆಣ್ಣು ಮಗುವಿಗೆ ಸೋಂಕು ದೃಢಪಟ್ಟಿದೆ.
ಮುಂಡಗೋಡಿನ ಮೂವರನ್ನ ಹೊರತುಪಡಿಸಿ ಉಳಿದವರು ಮಹಾರಾಷ್ಟ್ರದಿಂದ ವಾಪಸಾದವರು ಎಂದು ತಿಳಿದು ಬಂದಿದೆ. ದಾಂಡೇಲಿಯ 50 ವರ್ಷದ ಸೋಂಕಿತ ದೆಹಲಿಯಲ್ಲಿ ಸಿಆರ್ಪಿಎಫ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ವಾಪಸ್ ಆಗಿದ್ದರು ಎನ್ನಲಾಗಿದೆ.