ಕರ್ನಾಟಕ

karnataka

ETV Bharat / state

109 ಮಂದಿಯಲ್ಲಿ ಸೋಂಕು ದೃಢ...ಸೋಂಕಿತರ ಸಂಖ್ಯೆ 1274ಕ್ಕೆ ಏರಿಕೆ - ಉತ್ತರ ಕನ್ನಡ ಲೆಟೆಸ್ಟ್ ನ್ಯೂಸ್

ಮಂಗಳಾವಾರದಂದು 109 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1274ಕ್ಕೆ ಏರಿಕೆಯಾಗಿದೆ. ಈ ಪೈಕಿ 520 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.

Uttarakannada corona Case
Uttarakannada corona Case

By

Published : Jul 22, 2020, 12:45 AM IST

ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ 109 ಕೊರೊನಾ ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 1274ಕ್ಕೆ ಏರಿಕೆಯಾಗಿದೆ.

ಮಂಗಳವಾರದಂದು ಪತ್ತೆಯಾದ ಸೋಂಕಿತರ ಪೈಕಿ ಹಳಿಯಾಳದಲ್ಲಿಯೇ 44 ಮಂದಿ ಇದ್ದು, ಶಿರಸಿಯಲ್ಲಿ 22, ಹೊನ್ನಾವರ 13, ಕಾರವಾರ 8, ಕುಮಟಾ 7, ಮುಂಡಗೋಡ 6, ಭಟ್ಕಳ 5, ಜೊಯಿಡಾ 2, ಸಿದ್ದಾಪುರ ಹಾಗೂ ಯಲ್ಲಾಪುರದಲ್ಲಿ ತಲಾ ಓರ್ವವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇನ್ನೂ 35 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಭಟ್ಕಳದ 21 ಮಂದಿ, ಅಂಕೋಲಾ, ಹೊನ್ನಾವರದ ತಲಾ 5 ಮಂದಿ, ಕಾರವಾರ, ಕುಮಟಾದ ತಲಾ ಇಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟು 520 ಮಂದಿ ಗುಣಮುಖರಾಗಿದ್ದು, 12 ಮಂದಿ ಸಾವನ್ನಪಿದ್ದಾರೆ.

ABOUT THE AUTHOR

...view details