ಕಾರವಾರ(ಉ.ಕ) :ಕಾಳಿನದಿ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿರುವ ಕಾರಣ ಬುಧವಾರ ಮೂರು ಗೇಟ್ಗಳ ಮೂಲಕ 10,050 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಕದ್ರಾ ಜಲಾಶಯದ ಗರಿಷ್ಟ ಮಟ್ಟವು 34.50 ಮೀಟರ್‌ಗಳಾಗಿದ್ದು, ಜುಲೈ 14ರ ಮಧ್ಯಾಹ್ನ 3 ಗಂಟೆಗೆ ಜಲಾಶಯ ಮಟ್ಟ 31.38 ಮೀಟರ್ ತಲುಪಿದೆ.
ಜಲಾಶಯಕ್ಕೆ ಒಳಹರಿವಿನ ಪ್ರಮಾಣ 29,876 ಕ್ಯೂಸೆಕ್ ಇದ್ದು, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರ ಬಿಡಲಾಗಿದೆ. ಪ್ರತಿ ಗೇಟುಗಳಿಂದಲೂ 3,350 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ಕದ್ರಾ ಅಣೆಕಟ್ಟೆಯ ಜಲಾಶಯದ ಕೆಳ ಭಾಗದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಾಗೂ ಜಾನುವಾರುಗಳನ್ನ ಹೊರ ಬಿಡದಂತೆ ಸೂಚಿಸಲಾಗಿದೆ.