ಕಾರವಾರ (ಉ.ಕ): ಉತ್ತರಕನ್ನಡ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಸಿದ್ದಾಪುರದ ಬಳಿ ಹಳ್ಳವೊಂದು ತುಂಬಿ ಹರಿಯುತ್ತಿರುವ ಪರಿಣಾಮ ನೂರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ ಭಾಗದಲ್ಲಿ ನಿನ್ನೆಯಿಂದಲೂ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಇಂದು ಕೂಡ ಮಳೆಯಾರ್ಭಟ ಮುಂದುವರಿದಿದೆ.
ಉತ್ತರಕನ್ನಡದಲ್ಲಿ ಅಬ್ಬರಿಸಿದ ಮಳೆ: 100 ಎಕರೆ ಕೃಷಿ ಭೂಮಿ ಜಲಾವೃತ - ಕೃಷಿ ಭೂಮಿ ಜಲಾವೃತ
ನಿರಂತರ ಮಳೆಯಿಂದಾಗಿ ಅಘನಾಶಿನಿ ಹಾಗೂ ವರದಾ ನದಿ ತುಂಬಿ ಹರಿಯುತ್ತಿದೆ. ಸಿದ್ದಾಪುರ ತಾಲೂಕಿನ ಅರೆಂದೂರು ಬಳಿ ಹಳ್ಳ ತುಂಬಿ ಹರಿಯುತ್ತಿರುವ ಕಾರಣ ಸುಮಾರು 100 ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ.
![ಉತ್ತರಕನ್ನಡದಲ್ಲಿ ಅಬ್ಬರಿಸಿದ ಮಳೆ: 100 ಎಕರೆ ಕೃಷಿ ಭೂಮಿ ಜಲಾವೃತ 100-acaras-of-farmland-submerged-from-heavy-rain](https://etvbharatimages.akamaized.net/etvbharat/prod-images/768-512-12191427-thumbnail-3x2-uk.jpg)
ಉತ್ತರಕನ್ನಡದಲ್ಲಿ ಅಬ್ಬರಿಸಿದ ಮಳೆ
ನಿರಂತರ ಮಳೆಯಿಂದಾಗಿ ಅಘನಾಶಿನಿ ಹಾಗೂ ವರದಾ ನದಿ ತುಂಬಿ ಹರಿಯುತ್ತಿವೆ. ಸಿದ್ದಾಪುರ ತಾಲೂಕಿನ ಅರೆಂದೂರು ಬಳಿ ಹಳ್ಳ ತುಂಬಿ ಹರಿಯುತ್ತಿರುವ ಕಾರಣ ಸುಮಾರು 100 ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ಮುಂಗಾರು ಆರಂಭವಾದ ನಂತರ ರೈತರು ಬಿತ್ತನೆ ನಡೆಸಿದ್ದು, ಇದೀಗ ಮಳೆಯಿಂದಾಗಿ ಕೃಷಿ ಜಮೀನು ಜಲಾವೃತವಾಗಿವೆ.
ಓದಿ:ಚಿಕ್ಕಪಡಸಲಗಿ ಬ್ಯಾರೇಜ್ ಜಲಾವೃತ; ಅಪಾಯ ಲೆಕ್ಕಿಸದೆ ಯುವಕರ ಸೆಲ್ಫಿ ಕ್ರೇಜ್