ಕಾರವಾರ: ಸುರಿಯುತ್ತಿದ್ದ ಮಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಾನ್ಸ್ಫಾರ್ಮರ್(ಟಿಸಿ)ಗೆ ಡಿಕ್ಕಿಯಾದ ಪರಿಣಾಮ ಕಾರು ಸಂಪೂರ್ಣ ಸುಟ್ಟು, ಒಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಂಕೋಲಾ ತಾಲೂಕಿನ ಹಾರವಾಡ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಕೋಲಾ ಕಡೆಯಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಕಾರು ರಸ್ತೆ ಪಕ್ಕದಲ್ಲಿ ಇರುವ ಟಿಸಿಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಐವರಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಗೋಕರ್ಣದಿಂದ ತೆರಳುವಾಗ ಟಿಸಿಗೆ ಡಿಕ್ಕಿ: ಪ್ರವಾಸಕ್ಕೆ ಬಂದವರ ಕಾರು ಭಸ್ಮ, ಒಬ್ಬನ ಸಾವು - ಟಿಸಿಗೆ ಕಾರು ಡಿಕ್ಕಿ
ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿದ್ದು, ಆಂಧ್ರ ಮೂಲದ ಒಬ್ಬ ಮೃತಪಟ್ಟಿದ್ದಾನೆ.
![ಗೋಕರ್ಣದಿಂದ ತೆರಳುವಾಗ ಟಿಸಿಗೆ ಡಿಕ್ಕಿ: ಪ್ರವಾಸಕ್ಕೆ ಬಂದವರ ಕಾರು ಭಸ್ಮ, ಒಬ್ಬನ ಸಾವು ಅಪಘಾತ](https://etvbharatimages.akamaized.net/etvbharat/prod-images/768-512-15736796-90-15736796-1656948065592.jpg)
ಅಪಘಾತ
ಮೂಲತಃ ಆಂಧ್ರಪ್ರದೇಶದವರಾದ ಇವರು ಪ್ರವಾಸಕ್ಕೆಂದು ಭಾನುವಾರ ಗೋಕರ್ಣಕ್ಕೆ ಬಂದಿದ್ದರು. ಸೋಮವಾರ ಗೋವಾಕ್ಕೆ ತೆರಳುವ ವೇಳೆಗೆ ದುರ್ಘಟನೆ ಸಂಭವಿಸಿದೆ. ಟಿಸಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.
ಗೋಕರ್ಣದಿಂದ ತೆರಳುವಾಗ ಟಿಸಿಗೆ ಕಾರು ಡಿಕ್ಕಿ
(ಇದನ್ನೂ ಓದಿ: ಬಾಲಕನನ್ನು ನೀರಿಗೆ ಎಳೆದೊಯ್ದ ಮೊಸಳೆ : ಎಕ್ಸರೇಯಲ್ಲಿ ಹೊಟ್ಟೆ ಖಾಲಿ, ನದಿಯಲ್ಲೂ ಸಿಗದ ಮೃತದೇಹ!)
Last Updated : Jul 4, 2022, 9:35 PM IST