ಕರ್ನಾಟಕ

karnataka

ETV Bharat / state

ಜಾಗದ ವಿಚಾರಕ್ಕೆ ಜಗಳ: ಚೂರಿಯಿಂದ ಇರಿದು ಅಣ್ಣನನ್ನು ಕೊಂದ ತಮ್ಮ - younger brother murdered his elder brother in karkala

ತಮ್ಮನು ಅಣ್ಣನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆಯ ಬಜಕಳ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಶೇಖರ್, ಸಹೋದರ ರಾಜು ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಜಾಗದ ವಿಚಾರವಾಗಿ ಕೊಲೆ ನಡೆದುದಾಗಿ ತಿಳಿದು ಬಂದಿದೆ.

younger-brother-murdered-his-elder-brother-in-karkala
ಜಾಗದ ವಿಚಾರವಾಗಿ ಚೂರಿಯಿಂದ ಇರಿದು ಅಣ್ಣನನ್ನು ಕೊಂದ ತಮ್ಮ

By

Published : Mar 8, 2022, 11:30 AM IST

ಕಾರ್ಕಳ: ತಮ್ಮನು ತನ್ನ ಅಣ್ಣನನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಬಜಕಳ ಎಂಬಲ್ಲಿ ನಡೆದಿದೆ. ಶೇಖರ್(50) ಕೊಲೆಗೀಡಾದ ವ್ಯಕ್ತಿಯಾಗಿದ್ದು, ಶೇಖರ್ ಸಹೋದರ ರಾಜು(35) ಕೊಲೆ ಮಾಡಿರುವ ಆರೋಪಿ ಎಂದು ತಿಳಿದು ಬಂದಿದೆ. ಜಾಗದ ತಕರಾರಿಗೆ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಅಣ್ಣ ಶೇಖರ್ ಮತ್ತು ತಮ್ಮ ರಾಜು ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರು. ತಾಯಿಗೆ ಮಂಜೂರಾದ ಭೂಮಿಯಲ್ಲಿ ಅಣ್ಣ ಶೇಖರ ವಾಸವಾಗಿದ್ದ. ಅಣ್ಣನೊಂದಿಗೆ ವೈಮನಸ್ಸಿಂದ ರಾಜು ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿಕೊಂಡು ವಾಸವಾಗಿದ್ದ.

ಭಾನುವಾರ ಶೇಖರ ಮನೆಯಲ್ಲಿ ಅಂಗಳದ ಕಾಮಗಾರಿ ನಿರ್ವಹಿಸುತ್ತಿದ್ದು, ಮೂವರು ಕೆಲಸಗಾರರೊಂದಿಗೆ ಜೆಲ್ಲಿಯನ್ನು ಹೊತ್ತು ಮನೆಗೆ ಸಾಗಿಸುತ್ತಿದ್ದ. ಅಲ್ಲಿಗೆ ಪಾನಮತ್ತನಾಗಿ ಆಗಮಿಸಿದ ರಾಜು ಮನೆಯಲ್ಲಿ ದುರಸ್ತಿ ಕೆಲಸ ನಿರ್ವಹಿಸದಂತೆ ಆಕ್ಷೇಪಿಸಿದ್ದ ಎನ್ನಲಾಗಿದೆ. ನಂತರ ರಾಜು ಚೂರಿ ತಂದು ಅಣ್ಣನ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆಂದು ಆರೋಪಿಸಲಾಗಿದೆ. ಅತೀವ ರಕ್ತಸ್ರಾವದಿಂದ ಶೇಖರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸದ್ಯ ಆರೋಪಿ ಪರಾರಿಯಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ :ಉಕ್ರೇನ್ ಯುದ್ಧದಲ್ಲಿ ರಷ್ಯಾದ ಮೇಜರ್ ಜನರಲ್ ಹತ್ಯೆ

ABOUT THE AUTHOR

...view details