ಉಡುಪಿ : ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ. ಹಾವಂಜೆ ನಿವಾಸಿ ಜೋಸ್ನಾ ಲೂವಿಸ್ (23) ಮೃತ ಯುವತಿ.
ಉಡುಪಿ: ರೋಸ್ ಸಮಾರಂಭಕ್ಕೆ ಆಗಮಿಸಿದ ಯುವತಿ ಕುಸಿದು ಬಿದ್ದು ಸಾವು - ಕುಸಿದು ಬಿದ್ದು ಯುವತಿ ಸಾವು
ಸಂಬಂಧಿಕರ ಮನೆಯಲ್ಲಿ ರೋಸ್ ಸಮಾರಂಭಕ್ಕೆ ಬಂದಿದ್ದ ಯುವತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉಡುಪಿಯ ಹಾವಂಜೆಯಲ್ಲಿ ನಡೆದಿದೆ.
ಉಡುಪಿ: ರೋಸ್ ಸಮಾರಂಭಕ್ಕೆ ಆಗಮಿಸಿದ ಯುವತಿ ಕುಸಿದು ಬಿದ್ದು ಸಾವು
ಮೃತ ಜೋಸ್ನಾ ಅವರು ಬುಧವಾರ ರಾತ್ರಿ ಕೊಳಲಗಿರಿ ಹಾವಂಜೆಯ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ರಾತ್ರಿ ಸುಮಾರು 8.30ರ ಸುಮಾರಿಗೆ ಕುಳಿತಲ್ಲೇ ಕುಸಿದುಬಿದ್ದ ಜೋಸ್ನಾ ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಜೋಸ್ನಾ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ :ಕೆರೆ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಯುವತಿ ಕಾಲು ಜಾರಿ ಬಿದ್ದು ಸಾವು.. ಮೃತದೇಹಕ್ಕೆ ಉಪ್ಪಿನ ಶಾಸ್ತ್ರ!