ಉಡುಪಿ:ಅಗಲಿದ ಕನ್ನಡದ ಯುವರತ್ನ ಪುನೀತ್ ರಾಜ್ಕುಮಾರ್ಗೆ ಉಡುಪಿಯಲ್ಲಿ ಯಕ್ಷಗಾಯನ ಅಥವಾ ಯಕ್ಷಗೀತೆ ಮೂಲಕ ಅಂತಿಮ ನಮನ ಸಲ್ಲಿಸಲಾಗಿದೆ.
ಯಕ್ಷಗಾನದ ಅಭಿಮಾನಿಯಾಗಿದ್ದ ಪುನೀತ್ ರಾಜಕುಮಾರ್ ಹಲವು ಬಾರಿ ಯಕ್ಷಗಾನದ ಹಿರಿಮೆಗೆ ಮನಸೋತು ಮಾತನಾಡಿದ್ದರು. ಆದರೆ ಇದೀಗ ಜೀವನ ಪಯಣ ನಿಲ್ಲಿಸಿದ ಅಪ್ಪುಗೆ ಭಾಗವತ, ಹಿರಿಯ ಕಲಾವಿದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾಹಿತ್ಯ ಬರೆದು ಈ ಗೀತೆಯನ್ನು ಅರ್ಪಣೆ ಮಾಡಿದ್ದಾರೆ. ತೆಕ್ಕಟ್ಟೆಯ ಯಶಸ್ವಿ ಕಲಾವೃಂದ ಪದ್ಯವನ್ನು ಮಲ್ಯಾಡಿ ವಾಹಿನಿಯಲ್ಲಿ ಪ್ರಸ್ತುತಪಡಿಸಿದೆ.